ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಾಲಿಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ

Rashmi Kasaragodu
Updated On : 12 Oct 2013, 12:06 pm

ಕ.ಪ್ರ.ವಾರ್ತೆ   ಸಾಲಿಗ್ರಾಮ್ಣ ಅ. 11
ಸೇವಾ ಮನೋಭಾವನೆಯನ್ನು ಚಿಕ್ಕಂದಿನಿಂದಲೆ ಮನುಷ್ಯರು ಅಳವಡಿಸಿಕೊಳ್ಳಲು ರೆಡ್ಕ್ರಾಸ್ ಯೋಜನೆ ಅತ್ಯಂತ ಅಮೂಲ್ಯವಾದುದು ಎಂದು ಡಾ. ಕಮಲರಾಮನ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೆಡ್ಕ್ರಾಸ್ ಘಟಕದ ವತಿಯಿಂದ ನೈರ್ಮಲ್ಯತೆ, ಮಹಿಳೆಯರು, ಮಕ್ಕಳು, ದುರ್ಬಲರು, ವಿಕಲಚೇತನರು, ಆರೋಗ್ಯ, ಪ್ರಕೃತಿ ವಿಕೋಪ ಹೀಗೆ ಹತ್ತಾರು ವಿಷಯಗಳನ್ನು ಪ್ರಮುಖವಾಗಿ ಇಟ್ಟುಕೊಂಡು, ವಿವಿಧ ಕಾರ್ಯಕ್ರಮಗಳನ್ನು ಘಟಕದ ವತಿಯಿಂದ ಜಿಲ್ಲೆಯಾದ್ಯಂತ ನಡೆಸಲಾಗುತ್ತಿದೆ. ಇಂತಹ ಮಹತ್ಕಾರ್ಯದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಸಮಾಜದಲ್ಲಿ ಸೇವಾ ಬದುಕನ್ನು ನಡೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರಾಂಶುಪಾಲ ಪ್ರೊ. ಎಸ್.ಜಿ. ಪ್ರಕಾಶ್ ಮಾತನಾಡಿದರು. ವಕೀಲರಾದ ಹೇಮಾಲತ, ರೆಡ್ ಕ್ರಾಸ್ ಘಟಕದ ಕಾರ್ಯದರ್ಶಿ ವನಜಾ, ಸುರೇಶ್ ಜೈನ್, ಪ್ರಾಧ್ಯಾಪಕರಾದ ಬಸವಂತಪ್ಪ ಗುದಗತ್ತಿಯರ್, ಮಿರ್ಲೆ ಮೃತ್ಯುಂಜಯ, ಎಚ್.ಎಸ್. ಶ್ರೀನಿವಾಸ್, ಸತೀಶ್ಚಂದ್ರ, ಜಿ.ಆರ್. ಮಂಜುನಾಥ್, ವಿಷಕಂಠಯ್ಯ, ಕೃಷ್ಣೇಗೌಡ, ದೇವಮ್ಮಣಿ, ಶಂಕರ್, ರಾಜೇಶ್, ಎನ್ಎಸ್ಎಸ್ ಅಧಿಕಾರಿ ಕುಮಾರ್, ಕಂಪ್ಯೂಟರ್ ಶಿಕ್ಷಕ ಕೃಷ್ಣಮೂರ್ತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement