ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಸಾಹಿತ್ಯಕ್ಕೆ ಭಾಷೆ ಮೇಲಿನ ಹಿಡಿತ ಮುಖ್ಯ'

Rashmi Kasaragodu
Updated On : 12 Oct 2013, 12:08 pm

ಮೈಸೂರು: ಭಾಷೆಯ ಮೇಲಿನ ಹಿಡಿತವೇ ಸಾಹಿತ್ಯಕ್ಕೆ ಪ್ರಧಾನವಾದುದು ಎಂದು ಮಹಾರಾಣಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಬಿ.ವಿ. ವಸಂತಕುಮಾರ್ ಹೇಳಿದರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಕನ್ನಡ ವಿಭಾಗದಿಂದ ಪ್ರಥಮ ಬಿ.ಎ. ವಿದ್ಯಾರ್ಥಿನಿಯರಿಗಾಗಿ ಸಾಹಿತ್ಯದೊಂದಿಗೆ ಅನುಸಂಧಾನ ಎಂಬ ವಿಚಾರದ ಕುರಿತು ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು. ಅನುಸಂಧಾನವೆಂದರೆ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ ಮತ್ತು ಆಸಕ್ತಿಯಾಗಿರುತ್ತದೆ, ಅನುಭವಗಳಿಂದ ಹೊರಹೊಮ್ಮುವ ಅಭಿಪ್ರಾಯಗಳನ್ನು ಭಾಷೆಯ ಮೂಲಕ ಅಭಿವ್ಯಕ್ತಿಸಿದರೆ ಅದನ್ನು ಸಾಹಿತ್ಯವೆಂದು ಕರೆಯುವರು, ರಸಾನುಭವದ ಸುಂದರವಾದ ಅಭಿವ್ಯಕ್ತಿಯೇ ಸಾಹಿತ್ಯವೆಂದು ರಂ.ಶ್ರೀ.ಯವರು ಹೇಳಿದ್ದಾರೆ ಎಂದರು.
ಪ್ರಾಂಶುಪಾಲರಾದ ಎಂ. ಶಾರದಾ ಹಾಗೂ ಜಿ. ಪ್ರಸಾದಮೂರ್ತಿ ಇದ್ದರು. ಪ್ರಥಮ ಬಿ.ಎ. ವಿದ್ಯಾರ್ಥಿನಿ ಕೃಷ್ಣಕುಮಾರಿ ಪ್ರಾರ್ಥಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಮಾನಸ ಸ್ವಾಗತಿಸಿದರು. ಪ್ರಥಮ ಬಿ.ಎ. ವಿದ್ಯಾರ್ಥಿನಿ ವಿದ್ಯಾಶ್ರೀ ವಂದಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಅಶ್ವಿನಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement