ಹೊಸಗನ್ನಡ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಅಪಾರ'
ಕ.ಪ್ರ.ವಾರ್ತೆ ಮೈಸೂರು ಅ. 11
ಹೊಸಗನ್ನಡ ಸಾಹಿತ್ಯ ನಿರ್ಮಾಣದಲ್ಲಿ ಅಪಾರವಾದ ಕೊಡುಗೆ ನೀಡಿದ ಕೋಟ ಶಿವರಾಮ ಕಾರಂತರು ಸಾಹಿತ್ಯ ಹಲವಾರು ಪ್ರಕಾರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದು ವಿಜಯ ವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಹೇಳಿದರು.
ನಗರದ ಸರಸ್ವತಿಪುರಂನ ವಿಜಯವಿಠಲ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ವತಿಯಿಂದ ನಡೆದ ಶಿವರಾಮ ಕಾರಂತರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕತೆ, ಕಾದಂಬರಿ, ನಾಟಕ, ವಿಮರ್ಶೆ, ಪ್ರವಾಸ ಸಾಹಿತ್ಯ, ಆತ್ಮಚರಿತ್ರೆ, ಜೀವನ ಚರಿತ್ರೆ, ಗೀತರೂಪಕ, ಪ್ರಬಂಧ, ಗ್ರಂಥ ಸಂಪಾದನೆ, ಪತ್ರಿಕೋದ್ಯಮ, ನಿಘಂಟು ರಚನೆ, ವಿಶ್ವಕೋಶ, ಮಕ್ಕಳ ಸಾಹಿತ್ಯ, ಚಲನಚಿತ್ರ, ಶಿಕ್ಷಣ, ಕಲೆ ಹಾಗೂ ಯಕ್ಷಗಾನ- ಹೀಗೆ ಯಾರೂ ಕೂಡ ನಿಬ್ಬೆರಗಿನಿಂದ ಗಮನಿಸುವಂತಹ ವೈವಿಧ್ಯಪೂರ್ಣ, ಸತ್ವಪೂರ್ಣ, ಸಾಹಿತ್ಯ ರಚಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಕೈ ಹಾಕದ ಕನ್ನಡ ಸಾಹಿತ್ಯ ಪ್ರಕಾರವಿಲ್ಲ ಎಂಬ ಮೆಚ್ಚು ನುಡಿಗೆ ಅವರು ಪಾತ್ರರಾಗಿದ್ದಾರೆ ಎಂದು ಅವರು ತಿಳಿಸಿದರು.
ಕನ್ನಡ ಉಪನ್ಯಾಸಕ ಎಸ್.ಎಸ್. ರಮೇಶ್ ಭಾಗವಹಿಸಿದ್ದರು.