ಗಂಧದ ಉರುಸ್ ಆಚರಣೆ
ಕ.ಪ್ರ.ವಾರ್ತೆ ಮೈಸೂರು ಅ. 12
ಹಜರತ್ ಸೈಯದ್ ಶಾಹ್ ಮೊಹಮ್ಮದ್ ಉಮೇರ್-ಇ-ಮೆಜಾರ್ ಖಾದ್ರಿ ವತಿಯಿಂದ ಹಜರತ್ ಚಾರ್ ಬರಸ್ ಕೆ ಪೀರ್ ಅವರ ಗಂಧದ ಉರುಸ್ ಆಚರಿಸಲಾಯಿತು.
ಟಿಪ್ಪು ವೃತ್ತದ ಬಳಿಯ ಬಡಾ ಮಕಾನ್ ಸಮೀಪದ ಮೆಜಾರ್ನಲ್ಲಿ ಗಂಧದ ಉರುಸನ್ನು ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಮತ್ತು ದರ್ಗಾ ಸಜ್ಜದ್ ನಶೀನ್ ಸೈಯದ್ ಅಶ್ಫಾಕ್ ಪೀರ್ ಖಾದ್ರಿ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ಸಂಸದ ಎಚ್. ವಿಶ್ವನಾಥ್ ದರ್ಗಾಕ್ಕೆ ಭೇಟಿ ನೀಡಿದ್ದರು. ಸೈಯದ್ ಷಾ ಮೊಹಮ್ಮದ್ ಅಶ್ಫಾಕ್ ಪೀರಾನ್ ಖಾದ್ರಿ ಬಡಾ ಮಕಾನ್ ನಿವಾಸದಿಂದ ಗಂಧ ಮೆರವಣಿಗೆಯು ಫುಕ್ರಾಗಳು, ದರ್ವೇಶ್, ಸೂಫಿಜಾಮಾ ಜಮಾತ್ ಅವರೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಯಿತು.
ಗೋರಿಗೆ ನಮನ ಸಲ್ಲಿಸಿದ ಸಂಸದ ವಿಶ್ವನಾಥ್, ಶುಭ ಕೋರಿದರು. ದರ್ಗಾದ ಸಜ್ಜದ್ ನಶೀನ್ ಹಜರತ್ ಸೈಯದ್ ಷಾ ಮೊಹಮ್ಮದ್ ಅಶ್ವಾಕ್ ಪೀರ್ ಸಾಹೆಬ್ ಅಧ್ಯಕ್ಷತೆಯಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ. ಬಸವೇಗೌಡ, ಪಾಲಿಕೆ ಸದಸ್ಯ ರಾಮು, ಸುಹೇಲ್ ಬೇಗ್, ಫೈರೋಜ್ ಖಾನ್, ಪಾಲಿಕೆ ಮಾಜಿ ಸದಸ್ಯರಾದ ಸೈಯದ್ ಅಕ್ರಮ್, ಅಲ್ಫತಾ ನೌಜವಾನ್ ಸಮಿತಿ ಅಧ್ಯಕ್ಷ ಮನ್ಸೂರ್ ಸೇಠ್ ಕುಶಾಲಿ ಉಪಸ್ಥಿತರಿದ್ದರು.