ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಆಗ್ರಹ

Rashmi Kasaragodu
Updated On : 12 Oct 2013, 10:39 am

ಕ.ಪ್ರ.ವಾರ್ತೆ   ಮೈಸೂರು   ಅ. 12
ವಿದ್ಯುತ್ ಉತ್ಪಾದನೆ ಮಾಡುವ ಸಲುವಾಗಿ ಅಣುವಿದ್ಯುತ್ ಸ್ಥಾವರ ನಿರ್ಮಿಸಿ ಪಾರಿಸಾರಿಕವಾಗಿವಾಗಿ ಹಾಳು ಮಾಡಿರುವುದಕ್ಕೆ ಪರಿಹಾರ ಕೇಳುವಂತೆ ಮೈಸೂರು ಗ್ರಾಹಕರ ಪರಿಷತ್ ಸದಸ್ಯ ಎಸ್.ಜಿ. ಒಂಬತ್ಕೆರೆ ಕರೆ ನೀಡಿದರು.
ಜಯಲಕ್ಷ್ಮೀಪುರಂನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಇಂಧನಕ್ಕಾಗಿ ಜಾಗತಿಕ ಕಾರ್ಯಚರಣೆಯ ಮಾಸಾಚರಣೆಯಲ್ಲಿ ಮಾತನಾಡಿದ ಅವರು, ಅಣುವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಕೃಷಿ ಭೂಮಿಯನ್ನು ಆಕ್ರಮಿಸಿಕೊಂಡು ಹಾಳು ಮಾಡಿದ್ದು, ಜಲ ವಿದ್ಯುತ್ ಯೋಜನೆ ಮತ್ತೊಂದು ಕಡೆಯಿಂದ ಆಕ್ರಮಿಸಿಕೊಂಡಿದೆ. ಆದ್ದರಿಂದ ವಿದ್ಯುತ್ ಉತ್ಪಾದನೆಗೆ ಪರ್ಯಾಯವಾಗಿ ತಂತ್ರಜ್ಞಾನ ಆವಿಷ್ಕರಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ಗ್ರಾಹಕರ ಪರಿಷತ್ ಅಧ್ಯಕ್ಷ ಚಂದ್ರಪ್ರಕಾಶ್ ಮಾತನಾಡಿ, ಅಣುವಿದ್ಯುತ್ ಸ್ಥಾವರದಿಂದ ಹೊರ ಬರುವ ತ್ಯಾಜ್ಯವು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆತಂಕ್ಯ ವ್ಯಕ್ತಪಡಿಸಿದರು.
ಮಹಾಜನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ವಾಸುದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಡಾ.ಪಿ.ಆರ್. ನಾಗಶ್ರೀನಿವಾಸ್, ಪ್ರಾಂಶುಪಾಲ ಕೆ.ವಿ. ಪ್ರಭಾಕರ್, ಮೈಗ್ರಾಪದ  ಶೇಖರ್ ಅಯ್ಯರ್, ಶೇಖರ್ ಶರ್ಮಾ, ಎಂ.ಎಚ್. ಸುನಿತಾ, ಶಾಂಭವಿ, ಕ್ರಾಂತಿರಾಜ್ ಒಡೆಯರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement