'ವೃತ್ತಿ ಕೌಶಲ್ಯ- ಪ್ರತಿಭೆಗೆ ಎಲ್ಲೆಡೆ ಮಣೆ'
ಕ.ಪ್ರ.ವಾರ್ತೆ ಮೈಸೂರು ಅ. 12
ನಗರದ ಕೃಷ್ಣಮೂರ್ತಿಪುರಂನ ಎಸ್ಡಿಎಂ ಮಹಿಳಾ ಕಾಲೇಜಿನಲ್ಲಿ ಐದು ದಿನಗಳ ಕ್ಯಾಂಪಸ್ ನೇಮಕಾತಿ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಎಂಎಂಕೆ ಮತ್ತು ಎಸ್ಡಿಎಂ ಕಾಲೇಜಿನ ಉದ್ಯೋಗ ವೇದಿಕೆಯ ನಿರ್ದೇಶಕಿ ಪದ್ಮಾವತಿ ಮಹೇಶ್ ಮಾತನಾಡಿ, ವೈಯಕ್ತಿಕ ಹಾಗೂ ಸಂಘಟನೆಗಳ ನಡುವೆ ಬಾಂಧವ್ಯ ಏರ್ಪಟ್ಟರೆ ಉತ್ತಮ ಕಾರ್ಯಕ್ರಮ ರೂಪಿಸಬಹುದು. ಮೃದು ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ ಜಾಗತಿಕ ವಾತಾವರಣಕ್ಕೆ ಅವರನ್ನು ಕೊಡುಗೆಯಾಗಿ ನೀಡಲು ಸಹಕಾರಿಯಾಗುತ್ತದೆ ಎಂದರು.
ಎಸ್ಡಿಎಂ ಮಹಿಳಾ ಕಾಲೇಜಿನ ಪ್ರಾಂಶುಪಾಲ ಕೆ.ವಿ. ದಾಮೋದರಗೌಡ ಮಾತನಾಡಿ, ಕ್ಯಾಂಪಸ್ ನೇಮಕಾತಿ ತರಬೇತಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ತೀರಾ ಅಗತ್ಯವಿದೆ. ಅವರು ಶೈಕ್ಷಣಿಕವಾಗಿಯೂ ಬೆಳವಣಿಗೆ ಹೊಂದಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಎಂಎಂಕೆ ಮತ್ತು ಎಸ್ಡಿಎಂ ನಿಯೋಜನಾ ಅಧಿಕಾರಿ ಪ್ರೊ.ಎನ್. ಭಾರತಿ, ಸಂಯೋಜಕಿ ರಮ್ಯಾ, ವಿದ್ಯಾರ್ಥಿನಿ ಗಗನ ಇದ್ದರು.