ಸಿಬಿಎಸ್ನಿಂದ ಎಂಬಿಎಸ್ ಬಸ್ ಸೌಲಭ್ಯ
ಕ.ಪ್ರ.ವಾರ್ತೆ ಮೈಸೂರು ಅ. 12
ನಗರ ಬಸ್ ನಿಲ್ದಾಣದಿಂದ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಶಾಶ್ವತ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದ್ದು, ನೂತನ ಸೇವೆಗೆ ಶಾಸಕ ಎಂ.ಕೆ. ಸೋಮಶೇಖರ್ ಶನಿವಾರ ಚಾಲನೆ ನೀಡಿದರು. ನಗರ ಸಾರಿಗೆ ವಿಭಾಗದಿಂದ ಈ ಬಸ್ ಸೌಲಭ್ಯ ಒದಗಿಸಲಾಗಿದ್ದು, 5 ರು. ದರ ನಿಗದಿಪಡಿಸಲಾಗಿದೆ. ಪ್ರತಿದಿನ ಬೆಳಗ್ಗೆ 5.30ಕ್ಕೆ ಆರಂಭವಾಗುವ ಬಸ್ ಸಂಚಾರ ರಾತ್ರಿ 9.45ಕ್ಕೆ ಕೊನೆಗೊಳ್ಳಲಿದೆ. ಪ್ರತಿದಿನ 66 ಬಾರಿ ಸಂಚರಿಸಲಿದೆ. ನಗರ ಬಸ್ ನಿಲ್ದಾಣದಿಂದ ಸಯ್ಯಾಜಿರಾವ್ ರಸ್ತೆ, ದೊಡ್ಡಕೆರೆ ಮೈದಾನ, ಹಾರ್ಡಿಂಜ್ ವೃತ್ತ ಮೂಲಕ ಗ್ರಾಮಾಂತರ ಬಸ್ ನಿಲ್ದಾಣ ತಲುಪಲಿದೆ. ಅಲ್ಲಿ 5 ನಿಮಿಷ ನಿಲುಗಡೆಯಾಗಿ, ಲಷ್ಕರ್ ಪೊಲೀಸ್ ಠಾಣೆ, ಅಶೋಕ ರಸ್ತೆ, ಚಾಮರಾಜ ವೃತ್ತ ಮೂಲಕ ನಗರ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ. ಸದರಿ ಬಸ್ ಮಾರ್ಗ ಸಂಖ್ಯೆ 55 ಅನ್ನು ಹೊಂದಿದೆ. ಮೈಸೂರು ಪಾರಂಪರಿಕ ನಗರಿಯಾಗಿರುವುದರಿಂದ ಹಸಿರು ಬಣ್ಣದ ಬಸ್ ಅನ್ನು ಸಂಚಾರಕ್ಕೆ ಬಿಡಲಾಗಿದೆ. ಈಗ ಒಂದು ಬಸ್ ಸಂಚಾರ ಮಾಡಲಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದಲ್ಲಿ ಮತ್ತಷ್ಟು ಬಸ್ಗಳನ್ನು ಸೇವೆಗೆ ಒದಗಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಂ. ರಮೇಶ್ ತಿಳಿಸಿದರು. ನಗರ ಸಾರಿಗೆ ಸಂಚಾರ ಅಧಿಕಾರಿ ವಿ. ನಾಗರಾಜ್ ಇದ್ದರು.