ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಗಡಿಗಳ ಬಾಗಿಲು ಮುರಿದು ಸರಣಿ ಕಳವು

Vishwanath S
Updated On : 17 Oct 2013, 12:24 pm

ಕ.ಪ್ರ.ವಾರ್ತೆ , ಮೈಸೂರು , ಅ. 16
ನಗರದ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಬತ್ತು ಅಂಗಡಿಗಳ ಬಾಗಿಲು ಮುರಿದು 1.37 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
ವಿಜಯನಗರ 2ನೇ ಹಂತ, ಹೆಬ್ಬಾಳು ಬಳಿಯ ತ್ರಿವೇಣಿ ವೃತ್ತ, ಸೂರ್ಯ ಬೇಕರಿ ವೃತ್ತ, ಅಭಿಷೇಕ್ ವೃತ್ತದ, ಮಹದೇಶ್ವರ ಬಡಾವಣೆ ಬಳಿಯಿರುವ ಅಂಗಡಿಗಳಲ್ಲಿ ಸರಣಿ ಕಳವು ನಡೆದಿದೆ.
ಭೈರವೇಶ್ವರ ಮೆಡಿಕಲ್ ಸ್ಟೋರ್, ಆಶಾಪುರ್ ಬುಕ್ ಡಿಪೋ, ರಾಮದೇವ್ ಸ್ಯಾರಿ ಸೆಂಟರ್, ಮಹಾವೀರ ಎಲಕ್ಟ್ರಾನಿಕ್ಸ್, ಶ್ರೀಲಕ್ಷ್ಮೀ ವೆಂಕಟೇಶ್ವರ ಪ್ರಾವಿಷನ್ ಸ್ಟೋರ್, ರಾಮದೇವ್ ಟೀ ಸ್ಟಾಲ್, ಟೆಕ್ನೋವರ್ಲ್ಡ್ ಮೊಬೈಲ್ ಶಾಫಿ ಸೇರಿದಂತೆ 9 ಅಂಗಡಿಗಳ ಬಾಗಿಲು ಮುರಿದಿದ್ದಾರೆ.
ಈ ಪೈಕಿ ಮೊಬೈಲ್ ಶಾಫಿ ಅಂಗಡಿಯಲ್ಲಿದ್ದ 1.30 ಲಕ್ಷ ಮೌಲ್ಯದ ಮೊಬೈಲ್‌ಗಳು, ಭೈರವೇಶ್ವರ ಮೆಡಿಕಲ್ ಸ್ಟೋರ್‌ನಲ್ಲಿದ್ದ 7,000 ಸೇರಿದಂತೆ 1.37 ಲಕ್ಷ ಕಳವಾಗಿದೆ. ಉಳಿದ ಅಂಗಡಿಗಳ ಬಾಗಿಲು ಮುರಿದು ಒಳ ನುಗ್ಗಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮುಂಜಾನೆ ವಾಯುವಿಹಾರಕ್ಕೆ ತೆರಳುತ್ತಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡಿಸಿಪಿ ಎಂ.ಎಂ. ಮಹದೇವಯ್ಯ, ವಿಜಯನಗರ ಠಾಣೆ ಇನ್ಸ್‌ಪೆಕ್ಟರ್ ರವಿ, ಎಸ್‌ಐ ಕುಮಾರ್ ಮತ್ತು ಸಿಬ್ಬಂದಿ, ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement