'ಅನಿಲ, ಇಂಧನ ಪೂರೈಕೆಯಲ್ಲಿ ಸುಧಾರಣೆ'
ಟಿ. ನರಸೀಪುರ: ಗ್ರಾಮೀಣ ವಿತರಕ ಕೇಂದ್ರಗಳ ಮೂಲಕ ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರ ಅಡುಗೆ ಅನಿಲ ಹಾಗೂ ಇಂಧನ ಪೂರೈಕೆಯಲ್ಲಿ ಹಲವು ಸುಧಾರಣೆಗಳನ್ನು ತರುತ್ತಿದೆ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ತಾಲೂಕಿನ ದೊಡ್ಡೇಬ್ಬಾಗಿಲು ಗ್ರಾಮದಲ್ಲಿ ಬುಧವಾರ ಹಿಂದೂಸ್ಥಾನ್ ಪೆಟ್ರೋಲಿಯಂನ ಗ್ರಾಮೀಣ ವಿತರಣಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ವಿತರಕ ಕೇಂದ್ರಗಳಲ್ಲಿ ಅಡುಗೆ ಅನಿಲ ಮತ್ತು ಪೆಟ್ರೋಲ್, ಡೀಸೆಲ್‌ನಂತಹ ಇಂಧನಗಳು ಹಳ್ಳಿಗಳ ಜನರ ಬಳಕೆ ಲಭ್ಯವಾಗುತ್ತಿವೆ ಎಂದು ತಿಳಿಸಿದರು.
ತಾಲೂಕು ಕೇಂದ್ರವಾದ ನರಸೀಪುರದ ಜನಸಂಖ್ಯೆಗನುಗುಣವಾಗಿ ಮತ್ತೊಂದು ಅಡುಗೆ ಅನಿಲ ವಿತರಣೆಯ ಕೇಂದ್ರದ ಅಗತ್ಯವಿದೆ. ಬೇಡಿಕೆಯನ್ನು ಪರಿಗಣಿಸಿ, ಮತ್ತೊಂದು ವಿತರಣೆ ಕೇಂದ್ರಕ್ಕೆ ಅನುಮತಿ ನೀಡುವಂತೆ ಪೆಟ್ರೋಲಿಯಂ ಸಚಿವರಿಗೆ ಪತ್ರವನ್ನು ಬರೆಯಲಾಗಿದೆ. ದೊಡ್ಡೇಬ್ಬಾಗಿಲು ಸೇರಿದಂತೆ ಒಟ್ಟು ನಾಲ್ಕು ಹಿಂದೂಸ್ಥಾನ್ ಪೆಟ್ರೋಲಿಯಂ ಗ್ರಾಮೀಣ ವಿತರಕ ಕೇಂದ್ರಗಳು ಆರಂಭವಾಗಿವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಉಪಾಧ್ಯಕ್ಷೆ ಎಸ್. ಭ್ರಮರಾಂಬ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ. ಮಲ್ಲೇಗೌಡ, ತಾಪಂ ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನಸ್ವಾಮಿ, ಸುಧೀರ್ ಇದ್ದರು.