ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಸಂಸ್ಕೃತಿಗೆ ಕಳಸಪ್ರಾಯ ರಾಮಾಯಣ'

Vishwanath S
Updated On : 19 Oct 2013, 12:14 pm

ಹನೂರು: ದೇಶದಲ್ಲಿ ಪರಿವರ್ತನಾ ಸಮಾಜದ ಏಳಿಗೆಗಾಗಿ ಮಹಾನ್ ವಿಶ್ವಮಾನವ ವಾಲ್ಮೀಕಿಯ ಜಯಂತಿ ಆಚರಿಸಲಾಗುತ್ತಿದೆ ಎಂದು ತಹಸೀಲ್ದಾರ್ ನಂಜುಂಡಯ್ಯ ತಿಳಿಸಿದರು.
ಪಟ್ಟಣದ ಹೆಚ್ಚುವರಿ ತಹಸೀಲ್ದಾರ್ ಕಚೇರಿಯಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಪವಿತ್ರ ಗ್ರಂಥವಾದ ರಾಮಾಯಣ ರಚನೆ ಮಾಡಿ ಭಾರತದ ಸಂಸ್ಕೃತಿಗೆ ಕಳಸಪ್ರಾಯರಾದರು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದರು.
ಉಪತಹಸೀಲ್ದಾರ್ ಭೈರಯ್ಯ, ಆರ್.ಐ.ಮಾದೇಗೌಡ, ಗ್ರಾಮ ಲೆಕ್ಕಿಗರಾದ ನಾಗರಾಜು, ಬಸವರಾಜು, ವೆಂಕಟೇಶ್ ನಾಯ್ಡು, ಮಾಜಿ ಗ್ರಾಪಂ ಅಧ್ಯಕ್ಷ ನಾಗಪ್ಪನಾಯ್ಡು ಇತರರು ಇದ್ದರು.
ಪಂಚಾಯ್ತಿಯಲ್ಲೂ ಅಚರಣೆ: ಪಪಂನಲ್ಲೂ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪಪಂ ಮುಖ್ಯಾಧಿಕಾರಿ ಗಿರೀಶ್, ಆರೋಗ್ಯಾಧಿಕಾರಿ ಚೇತನ್‌ಕುಮಾರ್ ಮತ್ತು ಸಿಬ್ಬಂದಿ ಇದ್ದರು.
ಕಿರಣ್‌ಕುಮಾರ್ ಅಧಿಕಾರ ಸ್ವೀಕಾರ
ಹನೂರು: ಸಾರ್ವಜನಿಕರು ಹಾಗೂ ಪೊಲೀಸರ ಸಹಕಾರದೊಂದಿಗೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು  ಶ್ರಮಿಸುವುದಾಗಿ ಹನೂರು ಠಾಣಾ ಇನ್ಸ್‌ಪೆಕ್ಟರ್ ಕಿರಣ್‌ಕುಮಾರ್ ಹೇಳಿದರು.
ನೂತನ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿ, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಹನೂರು ಕ್ಷೇತ್ರಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡುವುದಾಗಿ ಅವರು ತಿಳಿಸಿದರು.
ಹನೂರು ಕ್ಷೇತ್ರದಲ್ಲಿ 108 ಗ್ರಾಮಗಳಿದ್ದು, ಅವುಗಳ ಪೈಕಿ ಕಾಡಂಚಿನ ಗ್ರಾಮಗಳೇ ಜಾಸ್ತಿ ಇರುವುದರಿಂದ ಈ ಭಾಗದಲ್ಲಿ ಗ್ರಾಮಸಭೆ ನಡೆಸಿ, ಸಾರ್ವಜನಿಕರು ಕಾನೂನು ಬಾಹಿರ ಅಕ್ರಮ ಚಟುವಟಿಕೆ ಹಾಗೂ ಜೂಜಾಟದದಲ್ಲಿ ತೊಡಗದಂತೆ, ಗಾಂಜಾ ಬೆಳೆದರೆ ಉಂಟಾಗುವ ಹಾನಿ ಮುಂತಾದವುಗಳ ಬಗ್ಗೆ ಅರಿವು ಮೂಡಿಸಲಾಗುವುದು. ಸಾರ್ವಜನಿಕರು ಯಾವುದೇ ವೇಳೆಯಲ್ಲಾಗಲಿ ನೇರವಾಗಿ ಸಂಪರ್ಕಿಸಿದರೆ ಸ್ಪಂದಿಸಲಾಗುವುದು ಎಂದು ಅವರು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement