ಹಿಂದುಳಿದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ
ನಂಜನಗೂಡು: ರಾಜಕೀಯವೂ ಸೇರಿದಂತೆ ಸಮಾಜದ ಎಲ್ಲ ರಂಗಗಳಲ್ಲೂ ಮುಂದೆ ಬರುವಲ್ಲಿ ಹಿಂದುಳಿದ ವರ್ಗದವರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವಂತೆ ಸಂಸದ ಆರ್. ಧ್ರುವನಾರಾಯಣ್ ಹೇಳಿದರು.
ಶ್ರೀಕಂಠೇಶ್ವರ ಕಲಾ ಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶುಕ್ರವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಶರವೇಗದಿಂದ ಬೆಳೆಯುತ್ತಿದೆ. ಇದೇ ವೇಳೆ ಮೂಢನಂಬಿಕೆ, ಕಂದಾಚಾರಗಳಿಗೆ ಜೋತು ಬೀಳಬಾರದೆಂದು ಕಿವಿಮಾತು ಹೇಳಿದ ಅವರು, ಶಿಕ್ಷಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ವಿನೂತನ ಕಾರ್ಯಕ್ರಮಗಳ ಮೂಲಕ ಸಾವಿರಾರು ಕೋಟಿ ವ್ಯಯಿಸುತ್ತಿವೆ. ಅದನ್ನು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಹಿಂದುಳಿದವರು, ಶೋಷಿತರು ಮತ್ತು ದಲಿತರು ಸಮಾಜದ ಮುಖ್ಯವಾಹಿನಿಗೆ ಸೇರಲು ಸಾಧ್ಯ ಎಂದು ತಿಳಿಸಿದರು.
ಗ್ರಾಮಗಳಲ್ಲಿ ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಕಿವಿಮಾತು ಹೇಳಿದರು. ಮುಖ್ಯ ಭಾಷಣಕಾರರಾದ ಡಾ. ಅನುಸೂಯ ಎಸ್. ಕೆಂಪನಹಳ್ಳಿ ಮಾತನಾಡಿದರು.
ಸಮಾರಂಭದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಾಪಂ ಇಒ ಕೃಷ್ಣಂರಾಜು, ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಸದಸ್ಯರಾದ ಶ್ರೀಕಂಠು, ಗೋವಿಂದರಾಜು, ಜಿಪಂ ಸದಸ್ಯರಾದ ಸಿದ್ದವೀರಪ್ಪ, ಕೆಂಪಣ್ಣ, ಡಾ. ಶಿವರಾಂ, ಚಿಕ್ಕರಂಗನಾಯ್ಕ, ಕೆ. ಮಾರುತಿ, ಎಲ್. ಮಾದಪ್ಪ, ಗೀತಾ ಧರ್ಮೇಂದ್ರ, ಮುಖಂಡರಾದ ರೇವಮ್ಮ ಮಾಲೇಗೌಡ, ಗೋಣಹಳ್ಳಿ ಕುಮಾರ್, ಚಂದ್ರು, ಪುರಸಭಾ ಸದಸ್ಯರಾದ ಮಹದೇವಸ್ವಾಮಿ, ಗಿರೀಶ್‌ಕುಮಾರ್, ಮಾಜಿ ಅಧ್ಯಕ್ಷರಾದ ಎನ್.ಆರ್. ದೊರೆಸ್ವಾಮಿ, ಸಿ.ಎಂ. ಶಂಕರ್, ಪಿ. ಶ್ರೀನಿವಾಸ್, ಮಾಜಿ ಉಪಾಧ್ಯಕ್ಷೆ ಗಾಯತ್ರಿ, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು,ಮಾಜಿ ಸದಸ್ಯ ಕೆ.ಬಿ. ಸ್ವಾಮಿ, ತಾ. ನಾಯಕ ಸಂಘದ ಅಧ್ಯಕ್ಷ ಕೆ.ಎಸ್. ಸುಬ್ಬಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಕಳಲೆ ಕೇಶವಮೂರ್ತಿ, ಪದ್ಮನಾಭರಾವ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚನ್ನಪ್ಪ, ಮುದ್ದುಮಾದೇಗೌಡ, ಗುರುಸ್ವಾಮಿ, ಬಿಇಒ ಪುರುಷೋತ್ತಮ್, ಸಿಪಿಐ ರಘು, ನೀಲಿಸಿದ್ದು, ಚಾಮರಾಜು, ಮಡಿಕೆಹುಂಡಿ ಶಿವಣ್ಣ, ನಾಗರಾಜು, ರಾಚನಾಯ್ಕ ಇದ್ದರು.