ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದಿರಾ ವಸತಿ ಯೋಜನೆ: ಪ್ರತಿ ಗ್ರಾಪಂಗೆ 20 ಮನೆ

Vishwanath S
Updated On : 25 Oct 2013, 12:18 pm

ಕ.ಪ್ರ.ವಾರ್ತೆ ,  ಕೆ.ಆರ್. ನಗರ ,  ಅ.  24
ಪ್ರಸಕ್ತ ಆರ್ಥಿಕ ವರ್ಷ ಬಸವ ಇಂದಿರಾ ವಸತಿ ಯೋಜನೆಯಡಿ ತಾಲೂಕಿನ 31 ಗ್ರಾಪಂಗಳಿಗೆ ತಲಾ 20 ಮನೆಗಳನ್ನು ನೀಡಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೂಡಲೆ ಗ್ರಾಮಸಭೆ ಕರೆದು ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಪಂಚಾಯಿತಿಯಲ್ಲಿ ಆಯ್ಕೆ ಮಾಡಿದ ಪಟ್ಟಿಯನ್ನು ಅ.28 ರೊಳಗೆ ಪೂರ್ಣಗೊಳಿಸಿ ಸಭೆಯ ನಡಾವಳಿಯನ್ನು ವೀಡಿಯೋ ಚಿತ್ರಣ ಮಾಡಿ ಜಾಗೃತಿ ಸಮಿತಿಗೆ ಕಳುಹಿಸಿಕೊಡಬೇಕು ಎಂದ ಅವರು, ಇಂದಿನ ತೀರ್ಮಾನವನ್ನು ಪಾಲನೆ ಮಾಡದೆ ಉಲ್ಲಂಘನೆ ಮಾಡುವ ಪಿಡಿಒಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಯ್ಕೆಯಾಗಿರುವ ಅರ್ಹರ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಿ ಅವರಿಗೆ ಮನೆ ವಿತರಿಸಬೇಕು. ಈ ಹಿಂದೆ ತಾಲೂಕಿನ 31 ಗ್ರಾಪಂಗಳಲ್ಲಿ 9 ಪಂಚಾಯಿತಿಗಳ ಫಲಾನುಭವಿಗಳ ಪಟ್ಟಿಗೆ ಸಮಿತಿ ಅನುಮೋದಿಸಿತ್ತು. ಉಳಿದ 22 ಪಂಚಾಯಿತಿಗಳ ಪಟ್ಟಿ ಸಕಾಲದಲ್ಲಿ ನೀಡದ ಕಾರಣ ಅನುಮೋದನೆ ನೀಡದೇ ತಡೆ ಹಿಡಿಯಬೇಕಾಯಿತು. ಮತ್ತೆ ಅಂತಹ ತಪ್ಪು ಪುನರಾವರ್ತನೆಯಾಗದಂತೆ ಗಮನಹರಿಸಿ ಎಂದು ಶಾಸಕರು ಸಲಹೆ ನೀಡಿದರು.
ಒಂದು ಮನೆಗೆ 1.25 ಲಕ್ಷ ಸಹಾಯಧನ ನಿಗದಿಪಡಿಸಿರುವುದರಿಂದ ಬೇಡಿಕೆ ಹೆಚ್ಚಾಗಿದ್ದು, ಸದಸ್ಯರ ಸಂಬಂಧಿಕರನ್ನು ಆಯ್ಕೆ ಮಾಡುವುದರ ಜತೆಗೆ ಆಮಿಷಗಳಿಗೆ ಮತ್ತು ಕೆಲವು ಒತ್ತಡದಿಂದ ಪಟ್ಟಿಯಲ್ಲಿ ಹೆಸರು ಸೇರಿಸಿದ್ದು, ಗಣನೆಗೆ ಬಂದ ಕಾರಣ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲು ಸಭೆ ತೀರ್ಮಾನಿಸಿತು.
ತಾಪಂ ಪ್ರಭಾರ ಅಧ್ಯಕ್ಷೆ ಶಕುಂತಲಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್‌ಖಾನ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ತಾಪಂ ಸದಸ್ಯರಾದ ನಾಗಣ್ಣ, ಕವಿತಾರವಿ, ಹಾಡ್ಯ ಮಹದೇವಸ್ವಾಮಿ, ಹೇಮಾವತಿ, ಜಯಲಕ್ಷ್ಮಿ, ಜಾನಕಮ್ಮ, ಕಮಲಮ್ಮ, ಸಣ್ಣಪ್ಪ, ಕೃಷ್ಣೇಗೌಡ, ರಾಮಪ್ಪ, ಸೀತಾರಾಮ್, ತಂದ್ರೆರವಿ, ತಹಸೀಲ್ದಾರ್ ಬಿ.ಎನ್. ವೀಣಾ, ಇಒ ಬಸವರಾಜು, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್ ಇದ್ದರು.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement