ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಂಜನಗೂಡು ಅಭಿವೃದ್ಧಿಗೆ 5 ಕೋಟಿ

Vishwanath S
Updated On : 25 Oct 2013, 12:18 pm

ಕ.ಪ್ರ.ವಾರ್ತೆ ,  ನಂಜನಗೂಡು ,  ಅ. 24
ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಸಿಎಂ ನಗರೋತ್ಥಾನ, ಮಧ್ಯಮ, ಸಣ್ಣ ಪಟ್ಟಣಾಭಿವೃದ್ಧಿ ಯೋಜನೆಯ ಸಿಎಂಎಸ್‌ಟಿಡಿಪಿ ಹಂತ ಎರಡನೇ ಯೋಜನೆಯಿಂದ 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ವಿವಿಧ ಕಾಮಗಾರಿಗೆ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಪಟ್ಟಣದ ಪುರಸಭೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯಿಂದ 9 ಕಿಮೀ ರಸ್ತೆ, 5 ಕಿಮೀ ಒಳಚರಂಡಿ ಕಾಮಗಾರಿ ನಿರ್ಮಾಣವಾಗಲಿದೆ. ದೇವಸ್ಥಾನದ ರಥದ ಬೀದಿ ರಸ್ತೆ ಡಾಂಬರೀಕರಣಕ್ಕೆ 20 ಲಕ್ಷ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ನಡೆಸಲಾಗುವುದು. ಶ್ರೀಕಂಠೇಶ್ವರನ ಕ್ಷೇತ್ರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಅವರ ಮೂಲಭೂತ ಸೌಕರ್ಯಕ್ಕಾಗಿ ಪ್ರವಾಸಿಗರ ತಾಣ ನಿರ್ಮಿಸಲು ಚಿಂತನೆ ನಡೆದಿದ್ದು, ಇಷ್ಟರಲ್ಲಿ ರೂಪು ರೇಷೆ ಸಿದ್ದಗೊಳಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಪುರಸಭೆಯನ್ನು ನಗರಸಭೆಯಾಗಿ ಪರಿವರ್ತಿಸಲು ಎಲ್ಲ ಸಿದ್ಧತೆ ನಡೆದಿದೆ. ಇದರಿಂದ ಪಟ್ಟಣದ ಜನತೆಗೆ ಹೆಚ್ಚು ಮೂಲಭೂತ ಸೌಕರ್ಯ ಸಿಗಲಿದೆ. ಈ ಎಲ್ಲ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ಆದೇಶಿಸಿದರು.
ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ತಹಸೀಲ್ದಾರ್ ಅರುಳ್‌ಕುಮಾರ್, ಜಿಲ್ಲಾ ಯೋಜನಾಧಿಕಾರಿ ಲಿಂಗಣ್ಣಯ್ಯ, ಎಇಇ ಕುಬೇರಪ್ಪ, ಜೆಇ ಯಶಸ್ವಿನಿ, ಯೋಜನಾಧಿಕಾರಿ ವೆಂಕಟನಾಯಕ್, ಮುಖ್ಯಾಧಿಕಾರಿ ಡಿ. ರಮೇಶ್, ಪುಟ್ಟಸ್ವಾಮಿ, ಭೂ ಸೇನಾ ನಿಗಮದ ಎಇಇ ಪ್ರಭುಶಂಕರ್, ಮಾಜಿ ಪುರಸಭಾಧ್ಯಕ್ಷ ಶ್ರೀನಿವಾಸ್, ದೊರೆಸ್ವಾಮಿ, ಶ್ರೀಧರ್, ಸಿ.ಎಂ. ಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement