ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅನುದಾನ ದುರ್ಬಳಕೆಯಾಗಿಲ್ಲ: ಸ್ಪಷ್ಟನೆ

Vishwanath S
Updated On : 27 Oct 2013, 12:22 pm

ಮೈಸೂರು: ನಗರಪಾಲಿಕೆಗೆ ಸರ್ಕಾರದಿಂದ ಬಂದಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಸ್ಪಷ್ಟಪಡಿಸಿದ್ದಾರೆ.
ಪ್ರತಿಯೊಂದು ಕಾಮಗಾರಿಯನ್ನು ನಿರ್ವಹಿಸುವಾಗ ಇದರ ಕ್ರಿಯಾಯೋಜನೆ ತಯಾರಿಸಿ, ಸ್ಥಾಯಿ ಸಮಿತಿ ಹಾಗೂ ಪಾಲಿಕೆ ಸಭೆಯಲ್ಲಿ ಮಂಜೂರಾತಿ ಪಡೆದು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮೋದನೆ ಪಡೆದು ಅಂದಾಜು ಪಟ್ಟಿ ತಯಾರಿಸಿ ಆಡಳಿತಾತ್ಮಕ ಮಂಜೂರಾತಿಯಾದ ನಂತರ ಟೆಂಡರ್ ಆಧಾರದಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತದೆ.
ಕಾಮಗಾರಿಯನ್ನು ಆರಂಭದಲ್ಲಿ, ಮಧ್ಯದಲ್ಲಿ ಹಾಗೂ ಮುಕ್ತಾಯದ ಸಂದರ್ಭದಲ್ಲಿ ಹೀಗೆ ಮೂರು ಹಂತದಲ್ಲಿ 3ನೇ ಪಾರ್ಟಿಯವರಿಂದ ತಪಾಸಣೆಗೆ ಒಳಪಡಿಸಿ ಕಿರಿಯ ಎಂಜಿನಿಯರುಗಳು ಅಳತೆಯನ್ನು ಅಳತೆ ಪುಸ್ತಕದಲ್ಲಿ ನಮೂದಿಸುತ್ತಾರೆ. ಈ ಅಳತೆಯನ್ನು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶೇ.100 ರಷ್ಟು ಪರಿಶೀಲಿಸಿದ ನಂತರ ಸಂಬಂಧಪಟ್ಟ ಸಹಾಯಕ ವಲಯ ಕಚೇರಿ ಆಯುಕ್ತರು ದೃಢಪಡಿಸುತ್ತಾರೆ. ನಂತರ ಬಿಲ್ ಅನ್ನು ಲೆಕ್ಕಪತ್ರ ಶಾಖೆಯಲ್ಲಿ ಪರಿಶೀಲಿಸಿ ಅನುದಾನ ಮಂಜೂರು ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಇಂದು ಐಎಎಸ್ ಆಕಾಂಕ್ಷಿಗಳಿಗೆ ಕಾರ್ಯಾಗಾರ
ಮೈಸೂರು: ಸಿಎಲ್ ಎಜುಕೇಟ್‌ನ ಮೈಸೂರು ಶಾಖೆಯಾದ ಕೃತ್ಯವಿದ್ಯಾ ಅಕಾಡೆಮಿಯು ಅ.27ರ ಬೆಳಗ್ಗೆ 10ಕ್ಕೆ ಐಎಎಸ್ ಸೇರಲಿಚ್ಛಿಸುವ ಅಭ್ಯರ್ಥಿಗಳಿಗಾಗಿ ಭಯ ನಿವಾರಣೆಗಾಗಿ ಕಾರ್ಯಾಗಾರವನ್ನು ಜಯಲಕ್ಷ್ಮಿಪುರಂ ಕಾಳಿದಾಸ ರಸ್ತೆಯಲ್ಲಿರುವ ಅಕಾಡೆಮಿಯಲ್ಲಿ ಆಯೋಜಿಸಲಾಗಿದೆ.
ಭಾರತೀಯ ಆಡಳಿತ ಸೇವೆ ಆಯ್ಕೆ ಕುರಿತು ಭಯ ಮತ್ತು ಸುಳ್ಳು ನಿವಾರಣೆ, ಮಾಕ್ ಟೆಸ್ಟ್, ಸಾರ್ವಜನಿಕ ಸೇವೆಯ ಬಗ್ಗೆ ಪರೀಕ್ಷೆ, ಸಾರ್ವಜನಿಕ ಸೇವೆ ಪರೀಕ್ಷೆ ಬರೆಯುವ ವಿಧಾನ ಹಾಗೂ ತಂತ್ರಗಾರಿಕೆಯನ್ನು ಈ ಕಾರ್ಯಾಗಾರದಲ್ಲಿ ಹೇಳಿಕೊಡಲಾಗುತ್ತದೆ ಎಂದು ಅಕಾಡೆಮಿಯ ನಿರ್ದೇಶಕ ಶ್ರೀನಿವಾಸ್ ಎನ್. ಭಾರದ್ವಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಕಾರ್ಯಾಗಾರದಲ್ಲಿ ಭಾಗವಹಿಸಲು 100 ಶುಲ್ಕ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಮಾಕ್ ಟೆಸ್ಟ್‌ನಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಅಭ್ಯರ್ಥಿಗಳಿಗೆ ಬಹುಮಾನ ನೀಡಲಾಗುವುದು. ಆಸಕ್ತರು ಮೊ. 92435 55122, 123 ಸಂಪರ್ಕಿಸಬಹುದು ಎಂದರು. ಚಿರಾಗ್ ಆಡ್ಸ್‌ನ ಮುಖ್ಯಸ್ಥ ವಿವೇಕ್ ಇದ್ದರು.
ಇಂದಿನಿಂದ ಸರಳ ಸಮೃದ್ಧಿಯೋಗ
ಮೈಸೂರು: ಪತಂಜಲಿ ಯೋಗಾಶ್ರವು ಟ್ರಸ್ಟ್ ಹಾಗೂ ಪ್ರಕಾಶ್ ಯೋಗಿ ಇಂಟರ್‌ನ್ಯಾಷನಲ್ ಫೌಂಡೇಷನ್ ಸಂಯುಕ್ತವಾಗಿ ಅ.27 ರಿಂದ ನ.9 ರವರೆಗೆ ಸರಳ ಸಮೃದ್ಧಿಯೋಗ (ಪತಂಜಲಿ ಕ್ರಿಯೆ) ಶಿಬಿರ ಆಯೋಜಿಸಿದೆ. ಕೆ.ಆರ್. ಮೊಹಲ್ಲಾ ಸಿದ್ದಪ್ಪ ಚೌಕ ಬಳಿಯ ಡಿಂಕೀಸ್ ಕಾನ್ವೆಂಟ್ ಮಹಡಿಯಲ್ಲಿರುವ ಕೆ.ಎಂ. ಪರಶಿವಮೂರ್ತಿ ಸಭಾಂಗಣದಲ್ಲಿ ಈ ಶಿಬಿರ ನಡೆಯಲಿದ್ದು, ಅ.27ರ ಸಂಜೆ 5.30ಕ್ಕೆ ಪತಂಜಲಿ ಯೋಗಾಶ್ರವು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಗುರೂಜಿ ಪ್ರಕಾಶ್ ಯೋಗಿ ಶಿಬಿರ ಉದ್ಘಾಟಿಸುವರು ಎಂದು ಸಂಯೋಜಕ ಎಂ.ಎಸ್. ಸಿದ್ದಲಿಂಗಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಮಾಜ ಸೇವಕರಾದ ಕೆ.ಎಂ. ಪರಶಿವಮೂರ್ತಿ, ಜಿ.ವಿ. ಶ್ರೀನಿವಾಸ ಶಾಸ್ತ್ರಿ ಅತಿಥಿಗಳಾಗುವರು. ಸರಳ ಸಮೃದ್ಧಿ ಯೋಗದಿಂದ ಪ್ರತಿಯೊಬ್ಬರು ಸರ್ವಾಂಗೀಣ ಅಭಿವೃದ್ಧಿ ಹೊಂದಬಹುದು. ಜೊತೆಗೆ ವೈದ್ಯ ಪದ್ಧತಿಗೆ ಸವಾಲೆಂಬಂತೆ ಇರುವ ಅಸ್ತಮಾ, ಬಿಪಿ, ಮೂರ್ಛೆರೋಗ, ಹೃದಯ ತೊಂದರೆ, ಬೊಜ್ಜು ಸೇರಿದಂತೆ ಮೊದಲಾದ ರೋಗಗಳಿಗೆ ಪರಿಹಾರ ಪಡೆಯಬಹುದು ಎಂದು ಅವರು ತಿಳಿಸಿದರು. ಆಸಕ್ತರು ಮೊ. 98809 15943 ಸಂಪರ್ಕಿಸಬಹುದು. ಯೋಗ ಗುರು ಪ್ರಕಾಶ್ ಯೋಗಿ, ಶಿಬಿರದ ಪ್ರಧಾನ ಸಂಚಾಲಕ ಮಹದೇವಸ್ವಾಮಿ ಇದ್ದರು.
ಬ್ಯಾಂಕ್ ಪರೀಕ್ಷೆಗೆ ತರಬೇತಿ
ಮೈಸೂರು: ನೇತಾಜಿ ಎಜುಕೇಷನ್ ಫೌಂಡೇಶನ್ ವತಿಯಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳು ನಡೆಸುವ ಕ್ಲರಿಕಲ್ ಮತ್ತು ಪ್ರೊಬೆಷನರಿ ಆಫೀಸರ್ಸ್ ನೇಮಕಾತಿ ಪರೀಕ್ಷೆಗೆ 45 ದಿನಗಳ ತರಬೇತಿ ಪ್ರಾರಂಭಗೊಂಡಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 9980639953 ಸಂಪರ್ಕಿಸಬಹುದು.
ಪ್ರಾಣಿಗಳ ದತ್ತು ಸ್ವೀಕಾರ
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ನಗರದ ಶಹ್ನವಾಜ್ ಅವರು ಒಂದು ಸಾವಿರ ರು. ಪಾವತಿಸಿ, ಲವ್‌ಬಾರ್ಡ್ ಅನ್ನು ದತ್ತು ಸ್ವೀಕರಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ನೀಡಲಿ
ಮೈಸೂರು: ನಾಡು, ನುಡಿ, ಜಲ ಮತ್ತು ಭಾಷೆಗಾಗಿ ಶ್ರಮಿಸುತ್ತಿರುವ ಹೋರಾಟಗಾರರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಒತ್ತಾಯಿಸಿದ್ದಾರೆ.
ಬಿಜೆಪಿ ದಲಿತ ಮೋರ್ಚಾಗೆ ನೇಮಕ
ಮೈಸೂರು: ಬಿಜೆಪಿಯ ಜಿಲ್ಲಾ ದಲಿತ ಮೋರ್ಚಾ ಪದಾಧಿಕಾರಿಗಳಾಗಿ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಈ ಕೆಳಕಂಡವರನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರು- ಕೆ. ಪುರುಷೋತ್ತಮ (ನಂಜನಗೂಡು ತಾ.), ಮಹದೇವಸ್ವಾಮಿ (ಮೈಸೂರು ತಾ.), ಕೆ.ಕೆ. ನಾರಾಯಣ (ಪಿರಿಯಾಪಟ್ಟಣ ತಾ.), ಸಣ್ಣಮೊಗಯ್ಯ (ಹುಣಸೂರು ತಾ.), ಚಾಮರಾಜ (ಎಚ್.ಡಿ. ಕೋಟೆ ತಾ.). ಪ್ರಧಾನ ಕಾರ್ಯದರ್ಶಿಗಳು- ಎಚ್. ಹನು (ಎಚ್.ಡಿ. ಕೋಟೆ ತಾ.), ಎಸ್. ಶಿವಮೂರ್ತಿ (ಟಿ. ನರಸೀಪುರ ತಾ.). ಕಾರ್ಯದರ್ಶಿಗಳು- ಮಹದೇವು (ಕೆ.ಆರ್. ನಗರ ತಾ.), ನರಸಿಂಹ (ಮೈಸೂರು ತಾ.), ಬಿ. ಶಿವಯ್ಯ (ನಂಜನಗೂಡು ತಾ.), ರವಿಕುಮಾರ್ (ಎಚ್.ಡಿ. ಕೋಟೆ ತಾ.), ರಾಮು (ಹುಣಸೂರು ತಾ.), ಖಜಾಂಚಿ- ಬಿ.ಎಸ್. ವಿಜಯಕುಮಾರ್ (ಪಿರಿಯಾಪಟ್ಟಣ ತಾ.), ಕಾರ್ಯಕಾರಿಣಿ ಸದಸ್ಯರು- ಮುದ್ದುಚೆಲುವಯ್ಯ (ಹುಣಸೂರು ತಾ.), ಆರ್. ಮುತ್ತರಾಜು (ಟಿ. ನರಸೀಪುರ ತಾ.), ಸೋಮಮ್ಮ (ಎಚ್.ಡಿ. ಕೋಟೆ ತಾ.), ಕರಿಯಪ್ಪ (ಮೈಸೂರು ತಾ.), ಎನ್.ಕೆ. ರವೀಂದ್ರ (ನಂಜನಗೂಡು), ಚಿಕ್ಕೀರಮ್ಮ (ನಂಜನಗೂಡು ತಾ.), ನಾಗರಾಜು (ಟಿ. ನರಸೀಪುರ ತಾ.), ಶಿವನಾಗ ಆರ್ಯ (ಎಚ್.ಡಿ. ಕೋಟೆ ತಾ.), ಸೋಮಣ್ಣ (ಎಚ್.ಡಿ. ಕೋಟೆ ತಾ.), ರಾಜಪ್ಪ (ಪಿರಿಯಾಪಟ್ಟಣ ತಾ.).
ತೋಟಗಾರಿಕೆ ಶಿಕ್ಷಕರ ನೇಮಕಕ್ಕೆ ಒತ್ತಾಯ
ಮೈಸೂರು: ರಾಜ್ಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ತೋಟಗಾರಿಕೆ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ರಾಜ್ಯಮಟ್ಟದ ತೋಟಗಾರಿಕೆ ತರಬೇತುದಾರರ ಒಕ್ಕೂಟದ ಅಧ್ಯಕ್ಷ ಮೂಗನಹುಂಡಿ ಯೋಗೇಶ್ ಆಗ್ರಹಿಸಿದರು. ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಡಿ.ಇಡಿ, ಬಿ.ಇಡಿ ಕಾಲೇಜುಗಳಲ್ಲಿ, ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ತೋಟಗಾರಿಕೆ ಶಿಕ್ಷಕರನ್ನು ನೇಮಿಸಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಅಕ್ಷರದಾಸೋಹ ಬಿಸಿಯೂಟಕ್ಕೆ ತೋಟಗಾರಿಕೆ ಶಿಕ್ಷಕರನ್ನು ನೇಮಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇದರಿಂದ ಮುಖ್ಯ ಶಿಕ್ಷಕರಿಗೆ ಬಿಸಿಯೂಟ ಜವಾಬ್ದಾರಿಯಿಂದ ಮುಕ್ತಿ ಸಿಗುತ್ತದೆ. ಕೃಷಿ ಕ್ಷೇತ್ರ, ತೋಟಗಾರಿಕೆ ಕ್ಷೇತ್ರಗಳ ಬಗ್ಗೆ ರೈತರಿಗೆ ತೋಟಗಾರಿಕೆ ಶಿಕ್ಷಕರಿಂದ ಮಾಹಿತಿ ತಿಳಿಸಬಹುದು ಎಂದರು. ದಸಂಸ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ತೋಟಗಾರಿಕೆ ತರಬೇತಿ ಹೊಂದಿರುವ 6 ಸಾವಿರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದರು. ಹೊಸೂರು ಕುಮಾರ್, ಆರ್. ನಾ ಗೇಶ್, ಖಜಾಂಚಿ ರಾಚಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement