ಅನ್ನಪೂರ್ಣೇಶ್ವರಿ, ಕಾವೇರಿ ಅಮ್ಮನವರ ಪ್ರತಿಷ್ಠಾಪನೆ
ಕ.ಪ್ರ.ವಾರ್ತೆ , ಮೈಸೂರು , ಅ. 27
ವಿಶ್ವಮಾನವ ಜೋಡಿ ರಸ್ತೆಯ ಪ್ರಸನ್ನ ಶಿವಲಿಂಗೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಭಾನುವಾರ ಅನ್ನಪೂರ್ಣೇಶ್ವರಿ ಮತ್ತು ಕಾವೇರಿ ಅಮ್ಮನವರ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವ ನೆರವೇರಿತು.
ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮತ್ತು ಮೇಯರ್ ಎನ್.ಎಂ. ರಾಜೇಶ್ವರಿ ಅವರು ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸೋಮೇಶ್ವರನಾಥ ಸ್ವಾಮೀಜಿ, ಧಾರ್ಮಿಕ ಆಚರಣೆಗಳಲ್ಲಿ ಪ್ರತಿಯೊಬ್ಬರು ತೊಡಗಬೇಕು. ಪೂಜೆಯಿಂದ ಮಾತ್ರ ನೆಮ್ಮದಿ, ಶಾಂತಿ ದೊರಕುತ್ತದೆ. ಆದ್ದರಿಂದ ಧಾರ್ಮಿಕ ಆಚರಣೆ ಇಲ್ಲದೆ ನಮಗೆ ಉಳಿಗಾಲವಿಲ್ಲ ಎಂದರು.
ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಬೆಳಗ್ಗೆಯಿಂದಲೆ ಜೀವನ್ಯಾಸ ಪ್ರಾಣಪ್ರತಿಷ್ಠಾ, ಅಧಿವಾಸ ಹೋಮ, ನಾಡಿ ಸಂಧಾನ ಪೂರ್ವಕ, ಕಲಾತತ್ಪ ಹೋಮ, ಪೂರ್ಣಾಹುತಿ, ಕುಂಭೋದ್ಪಾಸನ, ಕುಂಭಾಭಿಷೇಕ ಪೂಜಾವಿಧಿ ನೆರವೇರಿತು.
ಶಾಸಕ ಎಂ.ಕೆ. ಸೋಮಶೇಖರ್ ಮತ್ತು ಮಾಜಿ ಸಚಿವ ಎಸ್.ಎ. ರಾಮದಾಸ್ ಇಬ್ಬರೂ ಒಂದೆ ವೇದಿಕೆಯಲ್ಲಿ ಮತ್ತೊಮ್ಮೆ ಕಾಣಿಸಿಕೊಂಡರು. ಆದರೆ ಯಾರೊಬ್ಬರು ಮುಖಾಮುಖಿ ಮಾತನಾಡಲಿಲ್ಲ.
ನಾಗರಿಕ ವೇದಿಕೆ ಅಧ್ಯಕ್ಷೆ ಬಿ. ಬಸವಯ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಜಿ.ಕೆ. ವರದಪ್ಪ, ಉಪಾಧ್ಯಕ್ಷ ಪಿ. ರಮೇಶ್, ನಿರ್ದೇಶಕ ಸಿ. ಕೆಂಪಯ್ಯ, ಎಚ್.ಕೆ. ಅಪ್ಪಾಜಿಗೌಡ, ನಿರ್ದೇಶಕರಾದ ಎಸ್. ಚಂದ್ರಪ್ಪ, ಜೆ. ರಾಮಣ್ಣ, ಜೆ. ಲೋಕೇಶ್, ಬಿ. ನಾಗರಾಜು ಇದ್ದರು.