ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಠ್ಯೇತರ ಚಟುವಟಿಕೆ ಓದಿಗೆ ಪೂರಕ: ಕೋಟಿ

Vishwanath S
Updated On : 28 Oct 2013, 12:23 pm

ಕ.ಪ್ರ.ವಾರ್ತೆ , ಮೈಸೂರು , ಅ. 27
ಪಠ್ಯೇತರ ಚಟುವಟಿಕೆಗಳು ಓದಿಗೆ ಪೂರಕವೆ ಹೊರತು ಮಾರಕವಲ್ಲ ಎಂದು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಹೇಳಿದರು.
ಹ್ಯಾಪಿ ಕಿಡ್ಸ್ ಅಕಾಡೆಮಿ ಮತ್ತು ಕ್ರಿಸ್ಟಲ್ ಪಾರ್ಕ್ ಇನ್ ಸಂಯುಕ್ತವಾಗಿ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯ ದಸರಾ ಟ್ರೋಫಿ ಹಾಗೂ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಸದಾಕಾಲ ಓದಬೇಕು ಎಂದು ಪೋಷಕರು ಬಯಸುತ್ತಾರೆ. ಆದರೆ ಪಠ್ಯೇತರ ಚಟುವಟಿಕೆಗಳು ಓದಿಗೆ ಪೂರಕವಾಗಿರುತ್ತದೆ. ಮಕ್ಕಳಲ್ಲಿನ ಸೃಜನಶೀಲತೆಯನ್ನು ಹೊರ ತೆಗೆಯಲು ಅವು ಸಹಕಾರಿಯಾಗಿವೆ. ಮೈಸೂರು ಅರಸರ ಉತ್ತೇಜನದಿಂದಾಗಿ ಮೈಸೂರನ್ನು ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಯಿತು. ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ರಾಜಧಾನಿ ಹೆಸರನ್ನು ಉಳಿಸಬೇಕು ಎಂದರು. ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಡಾ. ಹನುಮಂತಪ್ಪ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ಚಂದ್ರಶೇಖರ್, ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ವಿಜಯವೆಂಕಟೇಶ್, ಹ್ಯಾಪಿ ಕಿಡ್ಸ್ ಅಕಾಡೆಮಿಯ ಲೀಲಾವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement