ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ ಉದ್ಘಾಟನೆ

Vishwanath S
Updated On : 28 Oct 2013, 12:22 pm

ಕ.ಪ್ರ.ವಾರ್ತೆ , ಎಚ್.ಡಿ. ಕೋಟೆ , ಅ. 27
ತಾಲೂಕಿನ ಹಂಚಿಪುರ ವಲಯದ ಮುಳ್ಳೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನೂತನ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಉದ್ಘಾಟನಾ ಸಮಾರಂಭ ನೆರವೇರಿತು.
ಕಾರ್ಯಕ್ರಮವನ್ನು ಪಡುವಲು ವಿರಕ್ತ ಮಠಾಧ್ಯಕ್ಷ ಮಹಾದೇವ ಸ್ವಾಮೀಜಿ ಉದ್ಘಾಟಿಸಿ, ಗಾಂಧೀಜಿ ಕಂಡ ಗ್ರಾಮ ರಾಜ್ಯ ಕನಸನ್ನು ನನಸು ಮಾಡುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯವಾಗಿದೆ. ಪ್ರತಿಯೊಬ್ಬನ ಬದುಕಿನಲ್ಲಿ ಸ್ವಾವಲಂಬನೆಯ ಬದುಕು ಹೊಂದಲು ನಾವೆಲ್ಲರೂ ಒಂದು ಎಂಬ ಭಾವನೆ ಎಲ್ಲರ ಮನದಲ್ಲೂ ರೂಪುಗೊಳ್ಳಬೇಕು. ಎಲ್ಲಾ ಧರ್ಮದ ಸದಸ್ಯರು ಸ್ನೇಹ ಮತ್ತು ಸಹಕಾರ ಮನೋಭಾವದಿಂದ ಸಂಘಗಳನ್ನು ನಡೆಸುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಂ.ಎಸ್. ಸೋಮಸುಂದರ್ ಅವರು ಸ್ವ-ಸಹಾಯ ಸಂಘಟನೆ ಮೂಲಕ ಮಹಿಳೆಯರು ಸ್ವಾವಲಂಬನೆ ಸಾಧಿಸಬೇಕೆಂದು ಕರೆ ನೀಡಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾ ಎಂ. ಚೇತನಾ, ಉಮಾರಬ್ಬ ಮಾತನಾಡಿದರು. ಜಿಪಂ ಸದಸ್ಯೆ ಭಾಗ್ಯಲಕ್ಷ್ಮಿ ನಿಂಗರಾಜು ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ರವಿಕುಮಾರ್, ವೀರಶೈವ ಸಮಾಜದ ಅಧ್ಯಕ್ಷ ಎಂ. ಪ್ರಕಾಶ್, ಶಿವಮ್ಮ ಸೋಮಣ್ಣ, ಚಿಕ್ಕತಾಯಮ್ಮ, ಎಂ. ಪರಶಿವಮೂರ್ತಿ, ಮೇಲ್ವಿಚಾರಕ ಪುನಿತ್‌ಕುಮಾರ್, ಆಂತರಿಕ ಲೆಕ್ಕ ಪರಿಶೋಧಕಿ ಪಾವನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement