ಹಿಂದೂಸ್ತಾನಿ ಗಾಯನ
ಮೈಸೂರು: ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಅ.29ರ ಸಂಜೆ 6ಕ್ಕೆ ಆಲೂರು ವೆಂಕಟರಾಯರ ಮನೆತನದ ಗೀತಾ ಆಲೂರ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿದ್ವಾನ್ ವೀರಭದ್ರಯ್ಯ ಹಾರ್ಮೋನಿಯಂ ಮತ್ತು ವಿದ್ವಾನ್ ಅನುರಾಗ್ ಆಲೂರ್ ಅವರು ತಬಲ ಸಹಕಾರ ನೀಡುವರು.
ಹಿರಿಯ ನಾಗರಿಕರ ಹಕ್ಕು ವಿಚಾರ ಸಂಕಿರಣ
ಮೈಸೂರು: ಕರ್ನಾಟಕ ರಾಜ್ಯ ಕಾರ್ಮಿಕರ ಹಾಗೂ ದಿನಗೂಲಿ ಕಾರ್ಮಿಕರ ಸಂಘವು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಅ.29ರ ಬೆಳಗ್ಗೆ 9.30ಕ್ಕೆ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಹಿರಿಯ ನಾಗರಿಕರ ಹಕ್ಕುಗಳ ಕುರಿತು ವಿಚಾರ ಸಂಕಿರಣ ಆಯೋಜಿಸಿದೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ ಶ್ರೀಪಾದ ಸಂಕೊಳ್ಳಿ, ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ನಂದಕುಮಾರ್ ಭಾಗವಹಿಸುವರು. ವಿವರಕ್ಕೆ ದೂ. 0821- 4191266, ಮೊ. 91416 14633 ಸಂಪರ್ಕಿಸಬಹುದು.
ಪಟ್ಟಾಭಿಷೇಕ ಯಕ್ಷಗಾನ
ಮೈಸೂರು: ಕರಾವಳಿ ಯಕ್ಷಗಾನ ಕೇಂದ್ರ ಮತ್ತು ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯು ಅ.29ರ ಸಂಜೆ 5.30ಕ್ಕೆ ಜಗನ್ಮೋಹನ ಅರಮನೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ ಮತ್ತು ಲವ-ಕುಶ ಯಕ್ಷಗಾನ ಪ್ರದರ್ಶನ ಆಯೋಜಿಸಿದೆ. ಹಿಮ್ಮೇಳನದಲ್ಲಿ ಭಾಗವತಿಕೆ ರಾಘವೇಂದ್ರ ಆಚಾರ್ಯ, ಸುನಿಲ್ ಭಂಡಾರಿ ಕಡತೋಕ ಮದ್ದಳೆ, ಜನಾರ್ದನ ಆಚಾರ್ಯ ಚಂಡೆ ಸಹಕಾರ ನೀಡುವರು. ಎನ್. ಉಷಾರಾಣಿ ಭಾಗವಹಿಸುವರು.
ಮಿಕ ಕ್ಯಾನ್ವಾಸ್- 2013
ಮೈಸೂರು: ಮೈಸೂರು ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಆರ್ಟ್ಸ್ ಸಂಸ್ಥೆಯು ಮಿಕಾ ಕ್ಯಾನ್ವಾಸ್- 2013 ಕಾರ್ಯಕ್ರಮವನ್ನು ಅ.29ರ ಬೆಳಗ್ಗೆ 8.45ಕ್ಕೆ ಮೇಟಗಳ್ಳಿ ಕೈಗಾರಿಕಾ ಪ್ರದೇಶದ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ. ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕಾರ್ಯದರ್ಶಿ ಅಮೀರ್ ಸದನ್ ವಹಿಸುವರು. ಅ.30ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಅತಿಥಿಯಾಗಿ, ಡಾ. ಆಯಿಷ ಎಂ. ಶರೀಫ್ ಭಾಗವಹಿಸುವರು. ಮೈಸೂರು ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿ ಫೌಜಾನ್ ರಹೀಲ್ ಅಧ್ಯಕ್ಷತೆ ವಹಿಸುವರು.
ಅರುಣ್ ಆಯ್ಕೆ
ಮೈಸೂರು: ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಎಲ್. ಅರುಣ್‌ಕುಮಾರ್ ಆಯ್ಕೆಯಾಗಿದ್ದಾರೆ.
ಘನತ್ಯಾಜ್ಯ ನಿರ್ವಹಣೆ ಸಮ್ಮೇಳನಕ್ಕೆ ಲೇಖನ ಆಹ್ವಾನ
ಮೈಸೂರು: ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತ 4ನೇ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಲೇಖನಗಳನ್ನು ಅ.31ರೊಳಗೆ ಸಲ್ಲಿಸಬೇಕು ಎಂದು ಸಂಘಟನಾ ಕಾರ್ಯದರ್ಶಿ ಪ್ರೊ. ವಿ. ಜಗನ್ನಾಥ್ ಕೋರಿದ್ದಾರೆ.
2014ರ ಜನವರಿ 28ರಿಂದ 30ರವರೆಗೆ ಆಂಧ್ರಪ್ರದೇಶದ ಹೈದರಬಾದ್‌ನ ಆಚಾರ್ಯ ರಂಗ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಈ ಸಮ್ಮೇಳನವನ್ನು ಆಂಧ್ರಪ್ರದೇಶ ಸರ್ಕಾರ ಮತ್ತು ಕೊಲ್ಕತ್ತಾ ಅಂತಾರಾಷ್ಟ್ರೀಯ ಘನತ್ಯಾಜ್ಯ, ವಾಯು ನಿರ್ವಹಣಾ ಸಮಿತಿ ಆಯೋಜಿಸಿದೆ.ಈ ಸಮ್ಮೇಳನಕ್ಕೆ ಕೃಷಿ, ಕೈಗಾರಿಕೆ, ನಗರಾಭಿವೃದ್ಧಿ ಹಾಗೂ ಸೇವಾ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಬಹುದು. ಈ ಸಮ್ಮೇಳನಕ್ಕೆ ಲೇಖನಗಳನ್ನು ಅ.31ರೊಳಗೆ ಸಲ್ಲಿಸಬೇಕು. ವಿವರಕ್ಕೆ ಢಿಢಿಢಿ.್ಝಡಢಿಟಛಢಿ.್ಛ್ಟಟ ಅಥವಾ ಇ- ಮೇಲ್ ವಿಳಾಸ ಞಛ್ಜಡ್ಝ್ಟಛಿಛ್ಝಿಟಿಜ್ಝಛಅ್ಜಟಛ್ಝಟ.್ಛ್ಟಟ ಅಥವಾ ಮೊ. 94480 50595 ಸಂಪರ್ಕಿಸಬಹುದು.
'ರಾಮ ಮಂದಿರದಲ್ಲಿ ವಾಲ್ಮೀಕಿ ಪ್ರತಿಷ್ಠಾಪಿಸಿ'
ಮೈಸೂರು: ಹಿಂದೂಗಳ ಶ್ರೇಷ್ಠ ಗ್ರಂಥವಾದ ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಅಥವಾ ವಿಗ್ರಹಗಳನ್ನು ನಾಯಕ ಸಮಾಜಕ್ಕೆ ಸೇರಿದ ರಾಮ ಮಂದಿರಗಳಲ್ಲಿ ಪ್ರತಿಷ್ಠಾಪಿಸಬೇಕಿದೆ ಎಂದು ನಿವೃತ್ತ ಎಸಿಪಿ ಎನ್. ಚೆಲುವರಾಜ್ ಅಭಿಪ್ರಾಯಪಟ್ಟರು. ನಾಯಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘವು ಭಾನುವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮತಾನಾಡಿದ ಅವರು, ಈ ವಿಚಾರವಾಗಿ ನಾಯಕ ಸಮಾಜದವರು ಗಂಭೀರ ಚಿಂತನೆ ನಡೆಸಿ ರಾಮಮಂದಿರಗಳಲ್ಲಿ ವಾಲ್ಮೀಕಿಗೆ ಸ್ಥಾನ ಕಲ್ಪಿಸಿಕೊಡಬೇಕು. ಸರ್ಕಾರಿ ನೌಕರರು ವಾಲ್ಮೀಕಿ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ನಾಯಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಎಂ. ಸಿದ್ದನಾಯಕ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮುಕ್ತ ವಿವಿ ಸಹ ಪ್ರಾಧ್ಯಾಪಕ ಡಾ. ಎಚ್.ಪಿ. ಮಂಜುನಾಥ್, ಟಿ. ನರಸೀಪುರ ತಾಲೂಕು ಅಧ್ಯಕ್ಷ ಶಿವಶಂಕರ್‌ಮೂರ್ತಿ, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಕೃಷ್ಣ, ಪಿ. ನಾಗಲಿಂಗಪ್ಪ, ಚಂದ್ರಮೋಹನ್ ಇದ್ದರು.
ರಾಜ್ಯೋತ್ಸವಕ್ಕಾಗಿ ಕೆ.ಆರ್. ವೃತ್ತ ಮುಕ್ತ
ಮೈಸೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ನ.1ರಂದು ಕೆ.ಆರ್. ವೃತ್ತದ ಮುಖೇನ ಮೆರವಣಿಗೆ ಹಾದುಹೋಗಲು ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಅನುಮತಿ ನೀಡಿದ್ದಾರೆ. ಮೆರವಣಿಗೆಯು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟು ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ವಿಶ್ವೇಶ್ವರಯ್ಯ ವೃತ್ತ(ಆಯುರ್ವೇದ), ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಬಂದು ಪುರಭವನ ಬಳಿ ಅಂತ್ಯಗೊಳ್ಳಲಿದೆ. ಕೆ.ಆರ್. ವೃತ್ತದಲ್ಲಿ ಪ್ರತಿಭಟನೆ ಮತ್ತು ಮೆರವಣಿಗೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ನ.1ರಂದು ಮಾತ್ರ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕೆ.ಆರ್. ವೃತ್ತದ ಸುತ್ತಲೂ ವಿಧಿಸಲಾಗಿರುವ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ನ.2ರಿಂದ ನಿರ್ಬಂಧ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಇಬ್ಬರಿಗೆ ಪಿಎಚ್.ಡಿ
ಮೈಸೂರು: ಡಾ. ಜಿ.ಟಿ. ಸೋಮಶೇಖರ್ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಶೈಲಾ ನಾಗರಾಜ್ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಅವರಿಗೆ ಇತಿಹಾಸ ವಿಷಯದಲ್ಲಿ ಪಿಎಚ್.ಡಿ ನೀಡಿದೆ. ಶೈಲಾ ನಾಗರಾಜ್ ಅವರು ಮಲ್ಲಮ್ಮ ಮರಿಮಲ್ಲಪ್ಪ ಮಹಿಳಾ ಪದವಿ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕಿ. ಡಾ. ಎಸ್. ಚಂದರಾಜು ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಗಿರಿಜಾ ನಾಗೇಂದ್ರಸ್ವಾಮಿ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ, ಸಕ್ಕರೆ ತಂತ್ರಜ್ಞಾನ ವಿಷಯದಲ್ಲಿ ಪಿಎಚ್.ಡಿ ನೀಡಿದೆ. ಗಿರಿಜಾ ಅವರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿ.