ಎನ್ಎಸ್ಎಸ್ಗೆ ನಾಳೆ ಚಾಲನೆ
ಟಿ. ನರಸೀಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳನ್ನು ಅ.30ರಂದು ಬೆಳಗ್ಗೆ 10.30ಕ್ಕೆ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಉದ್ಘಾಟಿಸುವರು. ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಶಾಸಕ ಆರ್. ಧರ್ಮಸೇನ, ಜಿಪಂ ಉಪಾಧ್ಯಕ್ಷೆ ಭ್ರಮರಾಂಭ ಮಲ್ಲಿಕಾರ್ಜುಸ್ವಾಮಿ, ಡಾ. ಎನ್.ಬಿ. ಸುರೇಶ್, ಡಾ. ಡಿ. ಉಮಾಪತಿ, ಪ್ರೊ. ನಟರಾಜು, ಪ್ರೊ. ಎ.ಎನ್. ಸೋಮಶೇಖರ್ ಭಾಗವಹಿಸುವರು.
ಮಹದೇವ ನೇಮಕ
ಟಿ. ನರಸೀಪುರ: ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಸಂಚಾಲಕರಾಗಿ ಗೋಪಾಲಪುರ ಸಿ. ಮಹದೇವ ನೇಮಕವಾಗಿದ್ದಾರೆ.