ಜಸ್ಕೋದಿಂದ ದಿಢೀರ್ ಕಾಮಗಾರಿ; ನಿವಾಸಿಗಳ ಪರದಾಟ
ಕ.ಪ್ರ.ವಾರ್ತೆ ಮೈಸೂರು ಅ. 28
ನಗರಕ್ಕೆ 24್ಢ7 ನೀರು ಪೂರೈಕೆ ಹೊಣೆ ಹೊತ್ತಿರುವ ಜಸ್ಕೋ ಸಂಸ್ಥೆಯವರು ಯಾವುದೇ ಮನ್ಸೂಚನೆ ನೀಡದೇ ಪೈಪ್ ಅಳವಡಿಸುವ ಕಾಮಗಾರಿ ಆರಂಭಿಸಿದ್ದರಿಂದ ವಿವೇಕಾನಂದ ನಗರದ ಶ್ರೀಪಾದಶೀಲೆ ಉದ್ಯಾನದ ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆಗೊಳಗಾದರು. ನಿವಾಸಿಗಳು ಏಳುವ ಮುನ್ನಾ ಜಸ್ಕೋ ಸಿಬ್ಬಂದಿ ಮನೆಯ ಮುಂದೆ ಪೈಪ್ ಹಾಕಲು ಹಳ್ಳ ತೋಡಿದ್ದರಿಂದ ಬಹುತೇಕ ಮಂದಿ ತಮ್ಮ ವಾಹನಗಳನ್ನು ಹೊರಕ್ಕೆ ತೆಗೆಯಲು ಸಾಧ್ಯವಾಗಲಿಲ್ಲ. ಸಂಜೆ 4 ರ ವೇಳೆಗೆ ಪೈಪ್ ಕಾಮಗಾರಿ ಮುಗಿದು, ಹಳ್ಳ ಮುಚ್ಚಲಾಯಿತು. ನಂತರವೇ ಬಹುತೇಕ ನಿವಾಸಿಗಳು ವಾಹನಗಳನ್ನು ಹೊರ ತೆಗೆದರು. ಇದರಿಂದ ಶಾಲಾ- ಕಾಲೇಜುಗಳಿಗೆ ತೆರಳುವವರಿಗೆ, ನೌಕರಿಗೆ ಹೋಗುವವರಿಗೆ ತೊಂದರೆಯಾಯಿತು. ಮುಂದಾದರೂ ಮಾಹಿತಿ ನೀಡಿ, ಸ್ಥಳೀಯರ ಸಹಕಾರ ಪಡೆದು, ಕಾಮಗಾರಿ ನಡೆಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.