ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪುರಭವನ ಸೇರಿದಂತೆ ಹಲವು ಸಮಿತಿಗೆ ಸದಸ್ಯರ ಆಯ್ಕೆ

Rashmi Kasaragodu
Updated On : 28 Oct 2013, 11:29 am

ಕ.ಪ್ರ.ವಾರ್ತೆ    ಮೈಸೂರು    ಅ. 28
ನಗರ ಪಾಲಿಕೆ ಶ್ರೀರಂಗಚಾರ್ಲು ಸ್ಮಾರಕ ಭವನ ಸಮಿತಿ, ಅಂಬಳೆ ಅಣ್ಣಯ್ಯ ಪಂಡಿತರ ಉಚಿತ ವಿದ್ಯಾರ್ಥಿನಿಲಯ, ಫಾರಂ ಸಮಿತಿ ಮತ್ತು ಗ್ರಂಥಾಲಯ ಸಮಿತಿಗೆ ಸೋಮವಾರ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಈ ಎಲ್ಲಾ ಸಮಿತಿಗಳಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಶ್ರೀರಂಗಚಾರ್ಲು ಸ್ಮಾರಕ ಭವನ ಸಮಿತಿ- ಎನ್. ಸುನಿಲ್ಕುಮಾರ್, ಜೆ.ಎಸ್. ಜಗದೀಶ್, ತಸ್ನೀಂ, ರತ್ನಲಕ್ಷ್ಮಣ, ಚೆನ್ನಪ್ಪ, ಎಂ.ಬಿ. ಜಗದೀಶ್, ಎಸ್. ಬಾಲು. ಅಂಬಳೆ ಅಣ್ಣಯ್ಯ ಪಂಡಿತರ ವಿದ್ಯಾರ್ಥಿ ನಿಲಯ- ಮೇಯರ್ ಎನ್.ಎಂ. ರಾಜೇಶ್ವರಿ(ಅಧ್ಯಕ್ಷರು), ಉಪ ಮೇಯರ್ ಶೈಲೇಂದ್ರ(ಪದನಿಮಿತ್ತ ಸದಸ್ಯರು), ಎಚ್.ಎನ್. ಶ್ರೀಕಂಠಯ್ಯ, ಆರ್. ಲಿಂಗಪ್ಪ, ಶಿವಕುಮಾರ್, ಜೆ.ಎಸ್. ಜಗದೀಶ್, ಪಿ. ಪ್ರಶಾಂತ್, ಕಂದಾಯ ಅಧಿಕಾರಿ ಮತ್ತು ಕಾರ್ಯದರ್ಶಿಗಳು.
ಫಾರಂ(ಸೂಯಜ್) ಸಮಿತಿ- ಉಪ ಮೇಯರ್ ಶೈಲೇಂದ್ರ(ಅಧ್ಯಕ್ಷರು), ಬಿ.ವಿ. ಮಂಜುನಾಥ್, ಎಸ್. ಬಾಲಸುಬ್ರಮಣ್ಯಂ, ಬಿ. ಭಾಗ್ಯವತಿ, ಪಿ. ಪ್ರಶಾಂತ್, ರಾಮಪ್ರಸಾದ್, ಆರ್. ರವೀಂದ್ರಕುಮಾರ್. ಗ್ರಂಥಾಲಯ ಸಮಿತಿ- ಕೆ.ಟಿ. ಚಲುವೇಗೌಡ, ಪುಷ್ಪಲತಾ. ಸದಸ್ಯರ ಆಯ್ಕೆಯನ್ನು ಮೇಯರ್ ಎನ್.ಎಂ. ರಾಜೇಶ್ವರಿ ಪ್ರಕಟಿಸಿದರು. ಉಪ ಮೇಯರ್ ಶೈಲೇಂದ್ರ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement