ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬೈಕ್ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

Rashmi Kasaragodu
Updated On : 28 Oct 2013, 11:30 am

ಕ.ಪ್ರ.ವಾರ್ತೆ    ಟಿ.ನರಸೀಪುರ    ಅ. 28
ಬೈಕ್ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ತಾಲೂಕಿನ ಯಡದೊರೆ ಗ್ರಾಮದ ಜವರಯ್ಯ ಎಂಬುವರ ಪುತ್ರ ಮಹದೇವಸ್ವಾಮಿ(30) ಎಂಬುವರೇ ಮತಪಟ್ಟ ಗಾಯಾಳು. ಕಳೆದ ಅ.23ರಂದು ಯಡದೊರೆ ಗೇಟ್ನ ತಿರುವಿನಲ್ಲಿ ಮೃತ ಮಹದೇವಸ್ವಾಮಿ ಸೇರಿದಂತೆ ದೋಲ್ ಮಾದಯ್ಯ ಎಂಬುವರ ಪುತ್ರ ಜ್ಯೋತೀಶ್ ಹಾಗೂ ಮಾದಯ್ಯ ಎಂಬುವರ ಪುತ್ರ ಮಹದೇವಸ್ವಾಮಿ ಬೈಕ್ನಲ್ಲಿ ಬರುತ್ತಿದ್ದಾಗ ಬಿದ್ದು ಗಾಯಗೊಂಡಿದ್ದರು. ಬೈಕ್ನ ಕೆಳಗೆ ಮಹದೇವಸ್ವಾಮಿ ಅವರ ಬಲಗಾಲು ಸಿಲುಕಿದ್ದರಿಂದ ಕಾಲಿನ ಮೂಳೆ ಮುರಿದಿತ್ತು. ಕೂಡಲೇ ಚಿಕಿತ್ಸೆಗೆ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಭಾನವಿ ಆಸ್ಪತ್ರೆಗೆ ಕರೆದೊಯ್ದು ನಂತರ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕಳೆದ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಜ್ಯೋತೀಶ್ ಮತ್ತು ಮಹದೇವಸ್ವಾಮಿ ಅವರು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಕೆ.ಆರ್. ಗೋಪಿಕೃಷ್ಣ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement