ಮಾನಸ ಅತ್ಯುತ್ತಮ ಸ್ವಯಂ ಸೇವಕಿ
ಮೈಸೂರು: ಜಿಲ್ಲಾ ಮಟ್ಟದ ಅಂತರ ಕಾಲೇಜು ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿದ್ದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿನಿ ಎಸ್.ಎಂ. ಮಾನಸ ಅವರು ಅತ್ಯುತ್ತಮ ಸ್ವಯಂ ಸೇವಕಿಯಾಗಿ ಆಯ್ಕೆಯಾಗಿದ್ದಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್ಎಸ್ಎಸ್ ಅಧಿಕಾರಿಗಳು,ಅಧ್ಯಾಪಕರು ಅಭಿನಂದಿಸಿದ್ದಾರೆ.
ರೇವಣ್ಣ ಆಯ್ಕೆ
ಮೈಸೂರು: ಮಾನಸ ಗಂಗೋತ್ರಿಯ ದಲಿತ ವಿದ್ಯಾರ್ಥಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಕೆ. ರೇವಣ್ಣ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಸ್.ಆರ್. ಚೇತನ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಪಿ. ಮಾದಯ್ಯ, ಕಾರ್ಯದರ್ಶಿಯಾಗಿ ಆರ್. ತೇಜೇಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಕಂಬಾರರ ಸಂಘಕ್ಕೆ ಲಿಂಗಶೆಟ್ಟಿ ಅಧ್ಯಕ್ಷ
ಮೈಸೂರು: ಕುಂಬಾರರ ಸಾರ್ವಜನಿಕ ವಿದ್ಯಾರ್ಥಿನಿಲಯ ಟ್ರಸ್ಟ್ನ ಅಧ್ಯಕ್ಷರಾಗಿ ಲಿಂಗಶೆಟ್ಟಿ ಅವರನ್ನು ಸರ್ವಾನುಮತದಿಂದ ನೇಮಿಸಲಾಗಿದೆ. ಟ್ರಸ್ಟ್ನ ಅಧ್ಯಕ್ಷರಾಗಿದ್ದ ಕೆ.ಟಿ. ಲಕ್ಷ್ಮಣಶೆಟ್ಟಿ ಅವರು ನಿಧನರಾದ ಹಿನ್ನೆಲೆಯಲ್ಲಿ ಅವರಿಗೆ ಸಂತಾಪ ಸೂಚಿಸಿ, ಅವರಿಂದ ತೆರವಾದ ಸ್ಥಾನಕ್ಕೆ ಲಿಂಗಶೆಟ್ಟಿ ಅವರನ್ನು ನೇಮಿಸಲಾಗಿದೆ. ಖಜಾಂಚಿ ದೊಡ್ಡಯ್ಯ ಅವರು ಲಿಂಗಶೆಟ್ಟರ ಹೆಸರು ಸೂಚಿಸಿದ್ದರು ಎಂದು ಕಾರ್ಯದರ್ಶಿ ಟಿ. ರಾಜು ತಿಳಿಸಿದ್ದಾರೆ.
ಹಿಂದಿ ದಿನಾಚರಣೆ
ಮೈಸೂರು: ಅ.30ರಂದು ಸಂಜೆ 4.30ಕ್ಕೆ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಹಿಂದಿ ದಿನಾಚರಣೆ ಏರ್ಪಡಿಸಿದೆ. ಪಿ. ಬಾಲಕಿಷನ್, ಡಾ. ನಿರ್ಮಲಾ ಭಾಗವಹಿಸುವರು.