ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎನ್ಟಿಎಂ ಶಾಲೆ; ಡಿಡಿಪಿಐಗೆ ಮತ್ತೆ ನೋಟಿಸ್

Rashmi Kasaragodu
Updated On : 29 Oct 2013, 11:40 am

ಕ.ಪ್ರ.ವಾರ್ತೆ   ಮೈಸೂರು   ಅ. 29
ನಗರದ ಮಹಾರಾಣಿ ಮಾದರಿ ಶಾಲೆಗೆ(ಎನ್ಎಂ) ಸಂಬಂಧಿಸಿದಂತೆ ಬಾಲನ್ಯಾಯ ಮಂಡಳಿ ನೇಮಿಸಿದ್ದ ದ್ವಿಸದಸ್ಯ ಸಮಿತಿಯ ವರದಿ ಕುರಿತು ಅಭಿಪ್ರಾಯ ತಿಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮಂಡಳಿಯು ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದೆ.
ನ.5ರೊಳಗೆ ಅಭಿಪ್ರಾಯ ತಿಳಿಸುವಂತೆ ಮಂಡಳಿ ಅಧ್ಯಕ್ಷ ಹಾಗೂ ಮುಖ್ಯ ಸಿವಿಲ್ ನ್ಯಾಯಾಧೀಶರಾದ ಬಿ. ನಂದಕುಮಾರ್ ಅವರು ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ. ಎನ್ಟಿಎಂ ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸುತ್ತದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಆತಂಕಗೊಂಡ ಶಾಲೆಯ ಮಕ್ಕಳು ಮತ್ತು ಪೋಷಕರು ಬಾಲನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿ, ತಮ್ಮ ಶಿಕ್ಷಣದ ಹಕ್ಕನ್ನು ರಕ್ಷಿಸುವಂತೆ ಕೋರಿದರು. ಈ ಅರ್ಜಿಯನ್ನು ಮಂಡಳಿಯು ಪುರಸ್ಕರಿಸಿ, ಮಂಡಳಿ ಸದಸ್ಯ ಪಿ.ಪಿ. ಬಾಬುರಾಜ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್. ಸೋಮಲತಾ ಅವರನ್ನೊಳಗೊಂಡ ಅಧ್ಯಯನ ಸಮಿತಿ ರಚಿಸಿತು. ಕಾಲಾವಕಾಶ ನೀಡಲಾಗಿತ್ತು. ಅದರಂತೆ ಅ.15ರೊಳಗೆ ಉಪ ನಿರ್ದೇಕರು ತಮ್ಮ ಅಭಿಪ್ರಾಯ ತಿಳಿಸಬೇಕಾಗಿತ್ತು. ಆದರೆ ದಸರಾ ಸಬೂಬು ಹೇಳಿ ಇನ್ನೊಂದು ವಾರ ಕಾಲಾವಕಾಶ ಮೌಖಿಕವಾಗಿ ಕೋರಿದ್ದರು. ಇದಕ್ಕೆ ಮನ್ನಣೆ ನೀಡಿದ ಮಂಡಳಿಯು ಈಗ ಮತ್ತೊಮ್ಮೆ ಉಪ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement