ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಐಒಬಿಯಿಂದ 'ಕಾವೇರಿ' ಹುಲಿ ದತ್ತು ಸ್ವೀಕಾರ

Rashmi Kasaragodu
Updated On : 29 Oct 2013, 11:39 am

ಕ.ಪ್ರ.ವಾರ್ತೆ   ಮೈಸೂರು   ಅ. 29
ಮೈಸೂರಿನ ಇಂಡಿಯನ್ ಓವರ್ಸೀಸ್ ಬ್ಯಾಂಕ್ನವರು 1 ಲಕ್ಷ ನೀಡಿ ಚಾಮರಾಜೇಂದ್ರ ಮೃಗಾಲಯದ ಹೆಣ್ಣು ಹುಲಿ ಕಾವೇರಿಯನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ. ಇದು ಎರಡನೇ ಬಾರಿಗೆ ಬ್ಯಾಂಕಿನಿಂದ ಹುಲಿಯ ದತ್ತು ಸ್ವೀಕಾರವಾಗಿದ್ದು, ಈ ಹಿಂದೆ 2011-12ನೇ ಸಾಲಿನಲ್ಲಿ ಇದೇ ಹೆಣ್ಣು ಹುಲಿಯನ್ನು ದತ್ತು ಸ್ವೀಕರಿಸಿದ್ದರು. ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಂ. ನರೇಂದ್ರ ಅವರು ದತ್ತು ಸ್ವೀಕಾರದ ಪ್ರಮಾಣ ಪತ್ರವನ್ನು ಪಡೆಯಲು ಅ.30ರಂದು ಮೃಗಾಲಯಕ್ಕೆ ಭೇಟಿ ನೀಡಲಿದ್ದಾರೆ. ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಸುರೇಶ್ ಅವರು ಪ್ರಮಾಣ ಪತ್ರವನ್ನು ಹಸ್ತಾಂತರಿಸಲಿದ್ದಾರೆ.
ಮೃಗಾಲಯದಲ್ಲಿರುವ 15 ಹುಲಿಗಳ ಪೈಕಿ 11 ಹುಲಿಗಳು ವಿವಿಧ ಏಜೆನ್ಸಿಗಳಿಂದ ದತ್ತು ಸ್ವೀಕಾರ ಮಾಡಲ್ಪಟ್ಟಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಮೃಗಾಲಯಕ್ಕೆ ಪ್ರಾಣಿ ದತ್ತು ಸ್ವೀಕಾರ ಯೋಜನೆಯಿಂದ 24,83,700 ಸಂಗ್ರಹವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ಹಾವು, ಪಕ್ಷಿ ದತ್ತು: ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಮೈಸೂರಿನ ಎಚ್.ಪಿ. ವನಿತಾ ಅವರು ಕಾಳಿಂಗ ಸರ್ಪ(3,500 ರು.), ಬೆಂಗಳೂರಿನ ವಿಷ್ಣು ಸ್ವಾಮಿನಾಥನ್ ಅವರು ಬಿಳಿ ನವಿಲು (3,500 ರು.) ಹಾಗೂ ಮುಂಬೈನ ಸಿದ್ದ್ ಚೇತನ್ ಸಾಂಗೈ ಅವರು ರೆಡ್ ಲೋರಿ ಪಕ್ಷಿಯನ್ನು(2 ಸಾವಿರ ರು.) ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement