ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಡಾನೆಗಳಿಂದ ಬೆಳೆ ನಾಶ

Rashmi Kasaragodu
Updated On : 29 Oct 2013, 11:42 am

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗ್ರಾಮಗಳ ರೈತರ ಜಮೀನುಗಳಿಗೆ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ.
ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಮದ ಮಾದೇವಮ್ಮ ಹಾಗೂ ತಮ್ಮೆಗೌಡರ ಜಮೀನುಗಳಲ್ಲಿ ಬೆಳೆದಿರುವ ಬತ್ತ ಮತ್ತು ರಾಗಿ ಬೆಳೆಗಳಿಗೆ ಸೋಮವಾರ ರಾತ್ರಿ ಕಾಡಾನೆಗಳು ನುಗ್ಗಿ ಬೆಳೆಯನ್ನೆಲ್ಲಾ ತಿಂದು, ತುಳಿದು ನಾಶಪಡಿಸಿವೆ.
ಸ್ಥಳಕ್ಕೆ ಕಚುವಿನಹಳ್ಳಿ ಶ್ರೇಣಿಯ ವನಪಾಲಕ ರಶೀದ್ ಮತ್ತು ಅರಣ್ಯ ರಕ್ಷಕ ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿ, ಇಲಾಖೆಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಯುವಕ ನಾಪತ್ತೆ
ಬೈಲಕುಪ್ಪೆ: ಹಂದಿಗುಡ್ಡ ಕಾವಲ್ ಗ್ರಾಮದ ನಾಗರಾಜ ನಾಯಕ ಎಂಬವರ ಪುತ್ರ ಮಣಿ ಅ. ಪಾಪ(19) ಎಂಬುವವರು ಕಾಣೆಯಾಗಿದ್ದಾರೆ. ಬೈಲಕುಪ್ಪೆಗೆ ಹೋಗಿ ಬರುವುದಾಗಿ ಹೇಳಿ ಹೋದ ಮಣಿ ಇದುವರೆಗೂ ಬಂದಿಲ್ಲ. 5 ಅಡಿ ಎತ್ತರ, ಕೆಂಪು ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಬದಕಿವಿಯ ಬಳಿ ಸಣ್ಣ ಚರ್ಮದ ಗಂಟು ಇದೆ. ಕನ್ನಡ ಮಾತನಾಡುತ್ತಾನೆ. ಈತನ ಸುಳಿವು ದೊರೆತರೆ ಹತ್ತಿರದ ಪೊಲಿಸ್ ಠಾಣೆಗೆ ಅಥವಾ ಬೈಲಕುಪ್ಪೆ ಪೊಲೀಸ್ ಠಾಣೆ ದೂ. 08223- 254433 ಸಂಪರ್ಕಿಸಬಹುದು.

ಬಸ್ ಡಿಕ್ಕಿ; ಬೈಕ್ ಸವಾರನಿಗೆ ಗಾಯ
ಬೈಲಕುಪ್ಪೆ: ಸಾರಿಗೆ ಬಸ್ಗೆ ಸ್ಕೂಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ತೀವ್ರ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪ ಕೊಪ್ಪ ಬಳಿ ನಡೆದಿದೆ.ಬೆಣಗಾಲು ಗ್ರಾಮದ ಮಾರಿಮುತ್ತು ತನ್ನ ಹೀರೋ ಹೊಂಡ ಬೈಕ್ನಲ್ಲಿ ಕುಶಾಲನಗರದಿಂದ ತರಕಾರಿ ತೆಗೆದುಕೊಂಡು ತನ್ನ ಗ್ರಾಮಕ್ಕೆ ಹಿಂದಿರುಗುವಾಗ ಪಿರಿಯಾಪಟ್ಟಣದ ಕಡೆಯಿಂದ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡು, ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬೈಲಕುಪ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೀರಿನ ಬಕೆಟ್ಗೆ ಬಿದ್ದು ಮಗು ಸಾವು
ಬೈಲಕುಪ್ಪೆ: ಮನೆಯ ಮುಂದಿನ ನೀರು ತುಂಬಿದ್ದ ಬಕೆಟ್ಗೆ ಬಿದ್ದು ಮಗು ಮೃತಪಟ್ಟಿರುವ ಘಟನೆ ಸಮೀಪದ ಮಂಚದೇವನಹಳ್ಳಿಯಲ್ಲಿ ನಡೆದಿದೆ.ಮಂಚದೇವನಹಳ್ಳಿಯ ರವಿ ಮತ್ತು ಅಶ್ವಿನಿ ಎಂಬವರ ಪುತ್ರಿ ಚೈತ್ರ(2) ಮನೆಯ ಮುಂಭಾಗ ಬಕೆಟ್ನಲ್ಲಿ ನೀರನ್ನು ತುಂಬಿಟ್ಟು ಪೋಷಕರು ಮನೆಯ ಒಳಗಿದ್ದಾಗ ಆಟವಾಡಲು ಹೊರಬಂದ ಬಕೆಟ್ಗೆ ಬಿದ್ದು ಮೃತಪಟ್ಟಿದ್ದಾಳೆ. ಸುಮಾರು 2 ಗಂಟೆ ನಂತರ ತಂದೆ- ತಾಯಿ ಬಂದು ನೀರಿನೊಳಗೆ ಬಿದ್ದಿದ್ದ ಬಾಲಕಿಯನ್ನು ಎತ್ತಿಕೊಂಡು ನೋಡಿದಾಗ ಮಗು ಮೃತಪಟ್ಟಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement