ನಾನಾ ತರಬೇತಿಗೆ ಅರ್ಜಿ ಆಹ್ವಾನ
ಮೈಸೂರು: ನವೋದಯ ಫೌಂಡೇಷನ್ ಸಬ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ತರಬೇತಿ ಆಯೋಜಿಸಿದೆ. ಆಸಕ್ತರು ನ.2ರೊಳಗೆ ಮೊ. 97418 69722 ಸಂಪರ್ಕಿಸಬಹುದು.
ನೇತಾಜಿ ಎಜುಕೇಷನ್: ಎಸ್ಐ ಮತ್ತು ಕಾನ್ಸ್ಟೇಬಲ್ಗಳಿಗೆ ನೇತಾಜಿ ಎಜುಕೇಷನ್ ಫೌಂಡೇಷನ್ ವತಿಯಿಂದ 2 ತಿಂಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಆಸಕ್ತರು ಮೊ. 99806 39953 ಅಥವಾ 87479 73808 ಸಂಪರ್ಕಿಸಬಹುದು.
ಡಾ. ರೆಡ್ಡೀಸ್: ಡಾ. ರೆಡ್ಡೀಸ್ ಫೌಂಡೇಷನ್ ನಿರುದ್ಯೋಗ ನಿವಾರಣಾ ಕಾರ್ಯಕ್ರಮ ಅಂಗವಾಗಿ ಅವಕಾಶ ವಂಚಿತರಿಗೆ ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಮತ್ತು ಐಟಿಐ ಆದವರಿಗೆ ಬಿಪಿಒ, ಡಾಟಾ ಎಂಟ್ರಿ, ಸ್ಟಾರ್ ಹೊಟೇಲ್, ಮಾರ್ಕೆಟಿಂಗ್, ಫ್ಯಾಕ್ಟರಿ ಹಾಗೂ ವಿವಿಧ ಕಂಪನಿಗಳಲ್ಲಿ ಟೆಕ್ನಿಕಲ್ ಹುದ್ದೆಗೆ ಅವಕಾಶ ಇದೆ. ಆಸಕ್ತರು 18ರಿಂದ 27 ವರ್ಷದೊಳಗಿನ ಯುವಕ- ಯುವತಿಯರು ನ.2ರೊಳಗೆ ಮೊ. 94819 15991 ಸಂಪರ್ಕಿಸಬಹುದು.
ಮೈಸೂರು ಸ್ಕೂಲ್ ಆಫ್ ಬ್ಯಾಂಕಿಂಗ್: ಐಬಿಪಿಎಸ್, ರಾಷ್ಟ್ರೀಕೃತ ಬ್ಯಾಂಕುಗಳ ಪ್ರೊಬೇಷನರಿ ಮತ್ತು ಕ್ಲರ್ಕ್ ಹುದ್ದೆಗೆ 60 ದಿನಗಳ ತರಬೇತಿ ಆಯೋಜಿಸಿದೆ. ಆಸಕ್ತರು ನ.3ರೊಳಗೆ ನಂ.1028/ಎ, ಸಿಎಚ್- 22/6, ಜಯಲಕ್ಷ್ಮಿವಿಲಾಸ ರಸ್ತೆ, ಚಾಮರಾಜಪುರಂ, ರಾಮಸ್ವಾಮಿ ವೃತ್ತದ ಹತ್ತಿರ, ಮೈಸೂರು- 05 ಇಲ್ಲಿ ಪ್ರತಿದಿನ ಬೆ.10ರಿಂದ ರಾತ್ರಿ 8ರವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದು.
ಜ್ಞಾನದೀಪ್ತಿ ಟ್ರಸ್ಟ್: ರಾಷ್ಟ್ರೀಕೃತ ಬ್ಯಾಂಕ್ಗಳ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಆಯೋಜಿಸಿದೆ. ಆಸಕ್ತ ಅಭ್ಯರ್ಥಿಗಳು ನ.5ರೊಳಗೆ ಮೊ. 9844099674 ಸಂಪರ್ಕಿಸಬಹುದು.
ಕರ್ನಾಟಕ ಸಂಗೀತ
ಮೈಸೂರು: ನಾರಾಯಣಶಾಸ್ತ್ರಿ ರಸ್ತೆಯ ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿಧಾನದಲ್ಲಿ ಅ.31ರ ಸಂಜೆ 7.30ಕ್ಕೆ ವಿದುಷಿ ಸ್ವರ್ಣ ರಘು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಏರ್ಪಡಿಸಲಾಗಿದೆ.
ಉದ್ಯೋಗ ತರಬೇತಿ
ಮೈಸೂರು: ಗುರು ರಾಘವೇಂದ್ರ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ವಯಂ ಉದ್ಯೋಗ ತರಬೇತಿ ಶಿಬಿರವನ್ನು ಆಯೋಜಿಸಿದ್ದು, ಆಸಕ್ತರು ಅ.31ರೊಳಗೆ ಅರ್ಜಿ ಸಲ್ಲಿಸಬಹುದು. ನಿರುದ್ಯೋಗ, ಯುವಕ- ಯುವತಿಯರಿಗೆ 30 ದಿನಗಳ ಕಂಪ್ಯೂಟರ್ ಹಾರ್ಡ್ವೇರ್, ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಮೊಬೈಲ್ ರಿಪೇರಿ, ಡಿಟಿಪಿ ಟೈಪಿಂಗ್ ತರಬೇತಿ ಏರ್ಪಡಿಸಿದೆ. ತರಬೇತಿಗೆ ಯಾವುದೆ ಶುಲ್ಕ ಇಲ್ಲ. ವಿವರಕ್ಕೆ ಮೊ. 77602 40575 ಸಂಪರ್ಕಿಸಬಹುದು.