ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೈಜೀರಿಯಾ ಪ್ರಜೆಗೆ ಕಣ್ಣಿನ ಶಸ್ತ್ರಚಿಕಿತ್ಸೆ

Rashmi Kasaragodu
Updated On : 29 Oct 2013, 11:48 am

ಮೈಸೂರು: ನೈಜೀರಿಯಾ ದೇಶದ ಪ್ರಜೆಯೊಬ್ಬರಿಗೆ ಮೈಸೂರಿನ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ನೈಜೀರಿಯಾ ದೇಶದ ಓಗೋನ್ಸ್(52) ಶಸ್ತ್ರಚಿಕಿತ್ಸೆಗೆ ಒಳಗಾದವರು. ಇವರು ಜೂನ್ನಲ್ಲಿ ವಾಸನ್ ಐ ಕೇರ್ ಆಸ್ಪತ್ರೆಗೆ ಕಣ್ಣಿನ ತಪಾಸಣೆಗೆ ಬಂದಿದ್ದು, ತಪಾಸಣೆಯಲ್ಲಿ ಕಣ್ಣಿನ ಪೊರೆ ಮತ್ತು ಡಯಾಬಿಟಿಸ್ ರೋಗ ಇರುವುದು ಗೊತ್ತಾಗಿದೆ. ಅಲ್ಲದೆ, ಓಗೋನ್ಸ್ ಅವರಿಗೆ ಕಿಡ್ನಿ ಮರು ಜೋಡಣೆ ಶಸ್ತ್ರಚಿಕಿತ್ಸೆಗೆ ಆಗಿತ್ತು. ಹೀಗಾಗಿ, ಕಿಡ್ನಿ ಶಸ್ತ್ರಚಿಕಿತ್ಸೆ ಮತ್ತು ಡಯಾಬಿಟಿಸ್ ಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಓಗೋನ್ಸ್ 10 ದಿನಗಳ ಹಿಂದೆ ಮಾಡಲಾದ ಬಲಗಣ್ಣು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಹಿರಿಯ ಪ್ಯಾಕೋ ಸರ್ಜನ್ ಡಾ. ವಿರುಪಾಕ್ಷಸ್ವಾಮಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಶಸ್ತ್ರಚಿಕಿತ್ಸೆಗೊಳಗಾದ ಓಗೋನ್ಸ್ ಮಾತನಾಡಿದರು.
ಯಶಸ್ವಿನಿ ಚಿಕಿತ್ಸೆ: ವಾಸನ್ ಐ ಕೇರ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ವಿ. ರಾಜೇಶ್ ಮಾತನಾಡಿ, ಒಂದು ತಿಂಗಳಿಂದ ನಮ್ಮ ಆಸ್ಪತ್ರೆಯಲ್ಲಿ ಸರ್ಕಾರದ ಯಶಸ್ವಿನಿ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ತಿಳಿಸಿದರು.


ನಾಳೆ ಮಕ್ಕಳ ಸಂಸತ್
ಮೈಸೂರು: ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಹಾಗೂ ಬದುಕು ಟ್ರಸ್ಟ್ ವಿವಿಧ ಹಿನ್ನೆಲೆಯುಳ್ಳ 50 ಮಕ್ಕಳ ಜಿಲ್ಲಾ ಮಟ್ಟದ ಕಾರ್ಯಾಗಾರ ಮಕ್ಕಳ ಸಂಸತ್ನ್ನು ಅ.31ರ ಬೆಳಗ್ಗೆ 10.30ಕ್ಕೆ ರಂಗಾಯಣದ ಶ್ರೀರಂಗದಲ್ಲಿ ಆಯೋಜಿಸಿದೆ. ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಕಾರ್ಯಕ್ರಮ ಉದ್ಘಾಟಿಸುವರು. ಸಮಾಜವಾದಿ ಪ. ಮಲ್ಲೇಶ್ ಅಧ್ಯಕ್ಷತೆ ವಹಿಸುವರು. ಡಿಡಿಪಿಐ ಎಚ್.ಆರ್. ಬಸಪ್ಪ, ಸಮತಾ ವೇದಿಕೆಯ ಮೀರಾ ನಾಯಕ್, ಯುನಿಸೆಫ್ ವಿಶೇಷ ಸಂಪರ್ಕಾಧಿಕಾರಿ ಪ್ರಸೂನ್ ಸೇನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಕ್ಯಾನ್ಸರ್ ತಪಾಸಣೆ
ಮೈಸೂರು: ಲಕ್ಷ್ಮೀಪುರಂ ವಾಣಿವಿಲಾಸ ರಸ್ತೆಯ ಪ್ರೀತಿ ಕ್ಯಾನ್ಸರ್ ಸೆಂಟರ್ ಅ.31ರಂದು ಕ್ಯಾನ್ಸರ್ನ ಉಚಿತ ತಪಾಸಣೆ ಆಯೋಜಿಸಿದೆ. ಕ್ಯಾನ್ಸರ್ ಪತ್ತೆಯಾದ ರೋಗಿಗಳು ಭಾಗವಹಿಸಬಹುದಾಗಿದ್ದು, ವಿವರಕ್ಕೆ ದೂ. 4259259 ಸಂಪರ್ಕಿಸಬಹುದು.


ಡಾ. ಎಲ್. ದೇವೇಗೌಡ ರಾಜಿನಾಮೆ

ಮೈಸೂರು: ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ನ ಅಧ್ಯಕ್ಷ ಡಾ. ಎಲ್. ದೇವೇಗೌಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಣೆಯಿಂದ ಟ್ರಸ್ಟ್ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಟ್ರಸ್ಟ್ನ ಮೂಲ ಉದ್ದೇಶಕ್ಕೆ ಧಕ್ಕೆ ಬಾರದಂತೆ ಪಕ್ಷಾತೀತ, ಜಾತ್ಯತೀತವಾಗಿ ಕೆಲಸ ಮಾಡಿದ್ದೇನೆ. ನನಗೆ ಸಹಕರಿಸಿದ ಟ್ರಸ್ಟ್ನ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement