ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಜೆಪಿ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ

Rashmi Kasaragodu
Updated On : 29 Oct 2013, 11:39 am

ಕ.ಪ್ರ.ವಾರ್ತೆ   ಮೈಸೂರು   ಅ. 29
ನಗರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಚಾಮರಾಜ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳಿಗೆ ಸೋಮವಾರ ನೇಮಕಾತಿ ಪತ್ರ ನೀಡಲಾಯಿತು.
ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಜಿ. ಗೋಪಾಲ್, ಉಪಾಧ್ಯಕ್ಷರಾಗಿ ಎಚ್. ನಾಗೇಶ್, ಡಿ.ಜಿ. ರವಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎನ್. ಸತ್ಯಾನಂದ ವಿಟ್ಟು, ಕಾರ್ಯದರ್ಶಿಯಾಗಿ ಜೆ. ಸೋಮಶೇಖರ್, ಕೆ.ಎಸ್. ಸೂರ್ಯ ನಾರಾಯಣ ಅವರಿಗೆ ನೇಮಕಾತಿ ಆದೇಶವನ್ನು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪಗೌಡ ವಿತರಿಸಿದರು.
ಖಜಾಂಚಿಯಾಗಿ ಕೆ. ಸುಂದರ್, ಕಾರ್ಯಕಾರಿಣಿ ಸದಸ್ಯರಾಗಿ ರವಿ, ಪ್ರಕಾಶ್, ದೇವರಾಜ್, ರವಿ, ಪ್ರಕಾಶ್, ಚಂದ್ರಶೇಖರ್, ಕುಮಾರ್, ಮೋಹನ್ ಗುಡ್ಡಗೇರಿ, ಪ್ರಕಾಶ್, ಉಮಾಮಹೇಶ್, ಮಹದೇವ ಮತ್ತು ರಮೇಶ್ ಅವರಿಗೆ ನೇಮಕಾತಿ ಆದೇಶ ನೀಡಿದರು. ಸಭೆಯಲ್ಲಿ ಮುಖಂಡರಾದ ಯಶಸ್ವಿನಿ ಸೋಮಶೇಖರ್, ವಿ. ಸೋಮಸುಂದರ್, ಹಿಂದುಳಿದ ವರ್ಗಗಳ ಮೋರ್ಚಾದ ನಗರ ಅಧ್ಯಕ್ಷ ಜೋಗಿ ಮಂಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement