ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಾವಲ್ಲೂ ಒಂದಾದರು...

Rashmi Kasaragodu
Updated On : 29 Oct 2013, 11:40 am

ಕ.ಪ್ರ.ವಾರ್ತೆ   ಮೈಸೂರು   ಅ. 29
'ಹುಟ್ಟು ಆಕಸ್ಮಿಕ, ಸಾವು ಖಚಿತ'. ಆದರೆ ಕೆಲವರ ಪಾಲಿಗೆ ಇದು ಅಪರೂಪದ ಸಂಗತಿಯೂ ಆಗಬಲ್ಲದು ಎಂಬುದಕ್ಕೆ ಈ ಸಾವಿನ ಪ್ರಕರಣ ನಿದರ್ಶನ.
ಈಗಾಗಲೇ ಪತಿ ಸಾವಿನ ಸುದ್ದಿ ತಿಳಿದು ಪತ್ನಿ ಸತ್ತಿರುವುದು, ಮಗನ ಸಾವಿನ ಸುದ್ದಿ ಕೇಳಿ ತಾಯಿ ಸತ್ತಿರುವುದು, ಅಣ್ಣನ ಸಾವಿನ ಸುದ್ದಿ ಕೇಳಿ ತಮ್ಮ ಸತ್ತಿರುವುದೂ ಉಂಟು. ಇಂತಹ ಸಾಲಿಗೆ ಮೈಸೂರಿನ ಖಾಟೂನ್ ಬಿ ಹಾಗೂ ಮಹೆರ್ ಜಬೀನ್ ಸೇರುತ್ತಾರೆ.   
ನರಸಿಂಹರಾಜ ಮೊಹಲ್ಲಾದ ಕಣಿಯರ ರಾಮಮಂದಿರ ರಸ್ತೆಯ ವಾಸಿಗಳೂ ಹಾಗೂ ವಕೀಲ ಮತ್ತು ಐಎಆರ್ಎಫ್ ರಾಷ್ಟ್ರೀಯ ಕಾರ್ಯದರ್ಶಿ ಶಬ್ಬಿರ್ ಅಹಮದ್ ಸಹೋದರಿಯರಾದ ಖಾಟೂನ್ ಬಿ(85) ಹಾಗೂ ಮಹೆಲ್ ಜಬೀನ್(65) ಸಾವಿನಲ್ಲೂ ಒಂದಾದ ಸಹೋದರಿಯರು.
ಕಳೆದ ಕೆಲವು ದಿನಗಳಿಂದ ನಜರಬಾದಿನ ಗೋಪಾಲಗೌಡ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖಾಟೂನ್ ಬಿ ಅ.26ರಂದು ಶನಿವಾರ ಸಂಜೆ 5.30ಕ್ಕೆ ನಿಧನರಾದರು. ಅಕ್ಕನ ಸಾವಿನ ಸುದ್ದಿ ತಿಳಿದು ಅಘಾತಗೊಂಡಿದ್ದ ತಂಗಿ ಮೆಹರ್ ಜಬೀನ್ ಅವರು ಅ.27ರಂದು ಭಾನುವಾರ ಬೆಳಗ್ಗೆ 7ಕ್ಕೆ ಸಾವಿಗೀಡಾದರು. ಸಹೋದರಿಯರನ್ನು ಒಟ್ಟಾಗಿ ಎನ್.ಆರ್. ಮೊಹಲ್ಲಾದ ಬಡಾಮಕಾನ್ನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಸಂತಾಪ: ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ಮಾಜಿ ಮೇಯರ್ ಪಿ. ವಿಶ್ವನಾಥ್, ನಗರ ಪಾಲಿಕೆ ಮಾಜಿ ಸದಸ್ಯ ಗುಂಡಪ್ಪಗೌಡ, ನೋಟರಿ ಎಂ.ಎ. ಹೇಮಲತಾ, ಜೆ.ಕೆ. ಟೆಯರ್ಸ್ ವ್ಯವಸ್ಥಾಪಕಿ ಮಂಜುಳಾ, ಸಂತ ಆನ್ಸ್ ಶಾಲೆಯ ಮುಖ್ಯಶಿಕ್ಷಕಿ ಮ್ಯಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement