ಹಿರಿಯರಿಗೆ ಆರ್ಥಿಕ ಸ್ವಾವಲಂಬನೆ ಅವಶ್ಯ
ಕ.ಪ್ರ.ವಾರ್ತೆ ಮೈಸೂರು ಅ. 29
ಇಂದು ಹಿರಿಯ ನಾಗರಿಕರಿಗೆ ಆರ್ಥಿಕ ಸ್ವಾವಲಂಬನೆ ಅವಶ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಶ್ರೀಪಾದ್ ಸಂಕೊಳ್ಳಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಾಜ್ಯ ಕಾರ್ಮಿಕರ ಹಾಗೂ ದಿನಗೂಲಿ ಕಾರ್ಮಿಕರ ಸಂಘ ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರಂಗಾಯಣದ ಶ್ರೀರಂಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ನಾಗರಿಕರ ಹಕ್ಕುಗಳ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬ ನಿರ್ವಹಣೆಯ ಜತೆಗೆ ಮಕ್ಕಳು ಹಾಗೂ ಮೊಮ್ಮಕ್ಕಳ ಜೀವನ ಸುಧಾರಣೆಗೆ ಶ್ರಮಿಸುವ ಹಿರಿಯ ನಾಗರಿಕರು ಅವರಿಗಾಗಿ ಆಸ್ತಿಯನ್ನು ಮಾಡಲು ತಮ್ಮ ಜೀವನವನ್ನು ಮುಡುಪಾಗಿಡುವುದನ್ನು ಕಾಣಬಹುದು. ಆದರೆ ತಮ್ಮ ಮುಪ್ಪಿನ ಕಾಲದಲ್ಲಿ ತಾವೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ಇಲ್ಲವೆನ್ನುವಂತಿಲ್ಲ. ಆದ್ದರಿಂದ ಹಿರಿಯ ನಾಗರಿಕರಿಗೆ ಮೊದಲು ಆರ್ಥಿಕ ಸ್ವಾವಲಂಬನೆ ಅತ್ಯಂತ ಅವಶ್ಯ ಎಂದರು.
ಸಾಮಾಜಿಕ ಬದಲಾವಣೆ ಅಗತ್ಯ: ನಮ್ಮ ಸಮಾಜದಲ್ಲಿ 65ರಿಂದ 75ರವರೆಗಿನ ವಯೋವಾನದ ಹಿರಿಯ ನಾಗರಿಕರು ಆನಾರೋಗ್ಯದಿಂದ ಹೆಚ್ಚಾಗಿ ಬಳಲುತ್ತಿದ್ದಾರೆ. ಅವರ ಸಮಸ್ಯೆಗೆ ಆರ್ಥಿಕ ಸುಧಾರಣೆಯ ಜತೆಗೆ ಸಾಮಾಜಿಕ ಬದಲಾವಣೆಯೂ ಬೇಕಾಗಿದೆ. ಅಂತಿಮ ಕಾಲದಲ್ಲಿ ಮಕ್ಕಳು ತಮ್ಮ ಹತ್ತಿರ ಇರುತ್ತಾರೆ ಹಾಗೂ ನಮ್ಮ ಪಾಲನೆ ಪೋಷಣೆ ಮಾಡುತ್ತಾರೆ ಎಂಬುವ ಆಲೋಚನೆ ಇರಿಸಿಕೊಳ್ಳುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಯಾರ ಮೇಲೂ ಅವಲಂಬಿತರಾಗದೆ ಸ್ವಾವಲಂಬನೆ ಬದಕು ನಡೆಸಲು ಬೇಕಾದ ವಾತಾವರಣವನ್ನೂ ಹಾಗೂ ಆತ್ಮವಿಶ್ವಾಸವನ್ನೂ ಹಿರಿಯರು ಬೆಳೆಸಿಕೊಳ್ಳಬೇಕು. ಹೆಚ್ಚಾಗಿ ಸಕರಾತ್ಮಕ ಚಿಂತನೆಯನ್ನು ಹೊಂದಿರಬೇಕು. ಯಾವುದೇ ಸಂಕಷ್ಟಕ್ಕೆ ಕುಗ್ಗಬಾರದು. ಮುಪ್ಪಿನ ವೇಳೆ ಆರೈಕೆಗೆ ಸಂಗಾತಿಯಿದ್ದರ ತುಂಬ ಸಹಕಾರಿಯಾಗಲಿದೆ. ಮಕ್ಕಳು ಮನೆಯನ್ನು ಇಟ್ಟಿಗೆಯಿಂದ ಕಟ್ಟುವ ಬದಲು ಹೃದಯದಿಂದ ಕಟ್ಟಬೇಕು ಎಂದು ಆಶಿಸಿದರು.
ಸನ್ಮಾನ: ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಹಿರಿಯ ನಾಗರಿಕರೂ ಆದ ಎಚ್.ಸಿ. ಸ್ವಾಮಿ, ಶ್ಯಾಮಲಾ ಮೂರ್ತಿ, ಎಚ್.ಕೆ. ರಾಮನಾಥನ್, ಎಲ್. ಶಿವಲಿಂಗಪ್ಪ ಹಾಗೂ ಶಂಕರನಾರಾಯಣ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ 30 ಮಂದಿ ಹಿರಿಯ ನಾಗರಿಕರಿಗೆ ಗಣ್ಯರು ಗುರುತಿನ ಚೀಟಿ ವಿತರಿಸಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ನಂದಕುಮಾರ್ ಮುಖ್ಯ ಅತಿಥಿಯಾಗಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್.ಆರ್. ವಿಜಯ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಕಾರ್ಮಿಕರ ಹಾಗೂ ದಿನಗೂಲಿ ಕಾರ್ಮಿಕರ ಸಂಘದ ರಾಜ್ಯಧ್ಯಕ್ಷ ಪಿ. ರಾಜಪ್ಪ ಹಾಗೂ ಶಿಕ್ಷಣ ತಜ್ಞ ಎಂ.ಎನ್. ಗೋಪಾಲ್ ಮುಖ್ಯ ಇದ್ದರು. ಪ್ರಧಾನ ಕಾರ್ಯದರ್ಶಿ ಡಾ. ನರಸಿಂಹಸ್ವಾಮಿ ನಿರೂಪಿಸಿದರು.