ಅಪರಿಚಿತ ವ್ಯಕ್ತಿ ಶವ ಪತ್ತೆ
ಮೈಸೂರು: ಮಂಡಿ ಮೊಹಲ್ಲಾ ಅಕ್ಬರ್ ರಸ್ತೆಯಲ್ಲಿ ಮಂಗಳವಾರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಈತನು ಯಾವುದೋ ಕಾಯಿಲೆ, ಊಟ ಇಲ್ಲದೆ ಅಥವಾ ಔಷಧೋಪಚಾರವಿಲ್ಲದೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಚಹರೆ- 40 ವರ್ಷ, 5 ಅಡಿ ಎತ್ತರ, ಸಾಧಾರಣ ಶರೀರ, ಎಣ್ಣೆಗೆಂಪು ಮೈಬಣ್ಣ, ಎಡ ಮುಂಗೈನಲ್ಲಿ ಹಳೆಯ ಗಾಯದ ಗುರುತಿದೆ. ಪಿಂಕ್ ಬಣ್ಣದ ಶರ್ಟ್, ಕಾಫಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418313 ಸಂಪರ್ಕಿಸಲು ಮಂಡಿ ಠಾಣೆ ಎಸ್ಐ ಶಬ್ಬೀರ್ ಹುಸೇನ್ ಕೋರಿದ್ದಾರೆ.
ಶಿಶು ಶವ ಪತ್ತೆ
ಮೈಸೂರು: ಮಂಡಿ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ನವಜಾತ ಗಂಡು ಶಿಶು ಶವ ಪತ್ತೆಯಾಗಿದೆ. ನಾಯಿ ಕಚ್ಚಿರುವುದರಿಂದ ಮಗುವಿನ ಮೈಮೇಲೆ ಗಾಯದ ಗುರುತಿದೆ. ಚಹರೆ- 8 ಇಂಚು ಉದ್ದ, ದುಂಡು ಮುಖ, ಬಿಳಿ ಮೈಬಣ್ಣ, ಬಲ ಕಂಕಳಿನ ಕೆಳಗೆ, ಬಲ ಕುಂಡಿಯ ಹತ್ತಿರದ ನಾಯಿ ಕಚ್ಚಿರುವ ಗುರುತಿದೆ. ಈ ಶಿಶುವಿನ ವಾರಸುದಾರರು ಇದ್ದಲ್ಲಿ ದೂ. 0821- 2418313 ಸಂಪರ್ಕಿಸಲು ಮಂಡಿ ಠಾಣೆ ಎಸ್ಐ ಶಬ್ಬೀರ್ ಹುಸೇನ್ ಕೋರಿದ್ದಾರೆ.