ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಮಾಲೆ; ಪರಿಹಾರಕ್ಕೆ ಅರ್ಜಿ

Rashmi Kasaragodu
Updated On : 31 Oct 2013, 12:18 pm

ಮೈಸೂರು: ನಗರ ಪಾಲಿಕೆ, ಜಸ್ಕೋ ಮತ್ತು ಇತರ ನಾಲ್ಕು ಇಲಾಖೆಗಳ ವಿರುದ್ಧ ಅವರ ಸೇವಾ ನ್ಯೂನತೆ ಆಧರಿಸಿ ಮೈಸೂರಿನ ಕರ್ನಾಟಕ ಗ್ರಾಹಕ ವೇದಿಕೆಯು ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗೆ ದೂರು ನೀಡಿ ಪರಿಹಾರ ಕೋರಿತ್ತು. ಕಳೆದ 2012ರ ಮಾರ್ಚ್ನಿಂದ ಜೂನ್ವರೆಗೆ ನಗರದಲ್ಲಿ ಕಾಮಾಲೆ ಕಾಯಿಲೆ ಹರಡಿತ್ತೆಂದು, ಇದರ ಪರಿಣಾಮವಾಗಿ ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥರಾದರೆಂದು ಆಪಾದಿಸಿ ದಂಡಾತ್ಮಕ ಪರಿಹಾರ ಕೋರಿ ದೂರು ಸಲ್ಲಿಸಲಾಗಿತ್ತು. ಸದರಿ ದೂರಿನ ವಿಚಾರಣೆ ಅಂತಿಮ ಹಂತದಲ್ಲಿದ್ದು, ಈ ನಡುವೆ ಕರ್ನಾಟಕ ಗ್ರಾಹಕ ವೇದಿಕೆಯು ಮಧ್ಯಂತರ ಅರ್ಜಿ ಸಲ್ಲಿಸಿ ನಗರದಲ್ಲಿ ಏಪ್ರಿಲ್ನಿಂದ ಜೂನ್(2012)ರಲ್ಲಿ ಕಾಮಾಲೆ ಕಾಯಿಲೆಗೆ ತುತ್ತಾದ ನಾಗರಿಕರನ್ನು ದೂರಿನಲ್ಲಿ ಸೇರಿಸುವಂತೆ ಕೋರಿತ್ತು. ಈ ಅರ್ಜಿಯನ್ನು ಜಿಲ್ಲಾ ವೇದಿಕೆ ಪುರಸ್ಕರಿಸಿ ಕಾಮಾಲೆ ಸಾಂಕ್ರಾಮಿಕ ರೋಗದಲ್ಲಿ ಬಳಲಿದ ವ್ಯಕ್ತಿಗಳನ್ನು ದೂರಿನಲ್ಲಿ ಸೇರಿಸಲು ಸೂಚಿಸಿದೆ. ಆದ್ದರಿಂದ ಕಾಮಾಲೆಗೆ ತುತ್ತಾದವರು ತಮ್ಮಲ್ಲಿರುವ ದಾಖಲೆಗಳೊಡನೆ ನ.29ರೊಳಗೆ ಅಧ್ಯಕ್ಷರು, ಮೈಸೂರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 100 ಡಿಡಿ ತೆಗೆದುಕೊಂಡು ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಮೊ. 98458 36061 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement