ಕುಂಚಿಟಿಗರ ಸಂಘದ ಸಭೆಯ ನಿರ್ಣಯಗಳ ಜಾರಿಗೆ ಆಗ್ರಹ
ಮೈಸೂರು: ಮೈಸೂರು ಜಿಲ್ಲಾ ಕುಂಚಿಟಿಗರ ಸಂಘದ 2011-13ರ ಸರ್ವ ಸದಸ್ಯರ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸದಸ್ಯತ್ವ ನೀಡುವ ಪ್ರಕ್ರಿಯೆಯಲ್ಲಿರುವ ಲೋಪಗಳ ಬಗ್ಗೆಯೂ ಗಮನ ಸೆಳೆಯಲಾಯಿತು. ಸಂಘದ ಬೈಲಾದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರಬೇಕಿರುವುದರ ಬಗ್ಗೆ ಆಡಳಿತ ಮಂಡಳಿಯ ಗಮನ ಸೆಳೆಯಲಾಯಿತು. ಇದೇ ವೇಳೆ ಏಕಾಏಕಿ ಸದಸ್ಯತ್ವ ಕೋರಿ ಬಂದಿರುವ ಅರ್ಜಿಗಳ ಪರಿಶೀಲನೆಗೆ ಮುಂದಾದಾಗ ಅನಂತ್ಕುಮಾರ್, ಎಂ.ಕೆ. ರವಿ, ವಿಶ್ವನಾಥ್ ಪ್ರತಿಭಟಿಸಿದರು. ಅಲ್ಲದೇ ಸದಸ್ಯರ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸಬೇಕು. ಇದೇ ರೀತಿ ಉಪೇಕ್ಷಿಸಿದರೆ ಮುಂದೆಯೂ ಹೆಚ್ಚಿನ ರೀತಿಯ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.