ತೆರಿಗೆ ವಿನಾಯ್ತಿ ಸಂಬಂಧ ಸಿಎಂಗೆ ಮನವಿ
ಕ.ಪ್ರ.ವಾರ್ತೆ ಮೈಸೂರು ಅ. 30
ರಾಜ್ಯದಿಂದ ಕೇರಳದ ಪುಣ್ಯಕ್ಷೇತ್ರವಾದ ಶಬರಿಮಲೆಗೆ ತೆರಳುವ ಭಕ್ತರ ವಾಹನಗಳಿಗೆ ತೆರಿಗೆ ವಿನಾಯಿತಿ ಕೊಡಿಸುವ ಸಂಬಂಧ ಕೇರಳ ಸಿಎಂ ಉಮ್ಮನ್ ಚಾಂಡಿ ಅವರೊಂದಿಗೆ ಸಮಾಲೋಚನೆ ನಡೆಸುವಂತೆ ಶಾಸಕ ಸಂದೇಶ್ ನಾಗರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ನಡೆದ ದಸರಾ ಮಹೋತ್ಸವದ ಸಂದರ್ಭದಲ್ಲಿ ದೇಶ- ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಒಂದು ತಿಂಗಳ ಕಾಲ ವಾಹನ ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಲಾಯಿತು. ಅದರಂತೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ನವೆಂಬರ್, ಡಿಸೆಂಬರ್, ಜನವರಿ ತಿಂಗಳವರೆಗೆ ತೆರಿಗೆ ವಿನಾಯಿತಿ ಕೊಡಿಸಲು ಮುಖ್ಯಮಂತ್ರಿಯವರು ಪ್ರಯತ್ನಿಸುವಂತೆ ಅವರು ಕೋರಿದ್ದಾರೆ.