ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದೈಹಿಕ ಆರೋಗ್ಯಕ್ಕೆ ಜಾಥಾ

Rashmi Kasaragodu
Updated On : 31 Oct 2013, 12:20 pm

ಕ.ಪ್ರ.ವಾರ್ತೆ   ಮೈಸೂರು   ಅ. 30
ಮೈಸೂರು ವಿವಿ ಸ್ನಾತಕೋತ್ತರ ಕ್ರೀಡಾ ಮಂಡಳಿ ಬುಧವಾರ ಆಯೋಜಿಸಿದ್ದ 2ನೇ ಮಾನಸೋಲ್ಲಾಸ ದೈಹಿಕ ಸಾಮರ್ಥ್ಯ ಓಟ ಅಭೂತ ಪೂರ್ವ ಯಶಸ್ಸು ಕಂಡಿತು.
ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯ ಜಾಗೃತಿ ಉದ್ದೇಶದಿಂದ ಆಯೋಜಿಸಿದ್ದ ಈ ಓಟ ಸ್ಪರ್ಧೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 150ಕ್ಕೂ ಹೆಚ್ಚು ಮಂದಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
3 ಕಿ.ಮೀ. ಓಟವು ಗಂಗೋತ್ರಿ ಕ್ಯಾಂಟೀನ್ನಿಂದ ಆರಂಭವಾದ ಓಟವು ಗಣಿತಶಾಸ್ತ್ರ ವಿಭಾಗ, ಭೌತಶಾಸ್ತ್ರ ವಿಭಾಗ, ಸ್ನಾತಕೋತ್ತರ ವಿದ್ಯಾರ್ಥಿ ನಿಲಯದ ಮುಂದಿನ ಅರಳಿಮರದ ಕಡೆಯಿಂದ ಬಲಕ್ಕೆ ತಿರುಗಿ ರಾಣಿ ಬಹದ್ದೂರ್ ಸಂಸ್ಥೆ, ಐಸಿಎಂ ಪಕ್ಕದ ಮನೋಶಾಸ್ತ್ರ ವಿಭಾಗ, ಭೂಗರ್ಭಶಾಸ್ತ್ರ, ಕ್ಯಾಂಟೀನ್ ಮುಂಭಾಗದ ರಸ್ತೆ ಮತ್ತು ಸೆನೆಟ್ ಭವನ ಮೂಲಕ ಗ್ಲೇಡ್ಸ್ ಬಳಿ ಓಟ ಮುಕ್ತಾಯಗೊಂಡಿತು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ 5 ಕಿ.ಮೀ. ಓಟವು ಕ್ಯಾಂಟೀನ್ ಮುಂದಿನಿಂದ ಆರಂಭಗೊಂಡು ಸೆನೆಟ್ ಭವನ, ಕುಕ್ಕರಹಳ್ಳಿ ಕೆರೆ ಏರಿಯ ಮೇಲೆ ಒಂದು ಓಟ, ಮತ್ತೆ ಸೆನೆಟ್ ಭವನದ ಮೂಲಕ ಗ್ಲೇಡ್ಸ್ ಮೈದಾನ ಪ್ರವೇಶಿಸಿತು.
ಈ ಓಟಕ್ಕೆ ಕುಲಸಚಿವ ಪ್ರೊ. ಸಿ. ಬಸವರಾಜು ಚಾಲನೆ ನೀಡಿದರು. ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೆ ಟೋಪಿ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಜಯ ಗಳಿಸಿದವರಿಗೆ ಟೀ ಶರ್ಟ್ ನೀಡಲಾಯಿತು. ಸ್ನಾತಕೋತ್ತರ ಕ್ರೀಡಾ ಮಂಡಳಿ ಅಧ್ಯಕ್ಷ ಪ್ರೊ. ಬಿ.ಎಸ್. ವಿಶ್ವನಾಥ್ ಅವರ ವಿದ್ಯಾರ್ಥಿಗಳೊಂದಿಗೆ ಓಟದಲ್ಲಿ ಭಾಗವಹಿಸಿ 12ನೇ ಸ್ಥಾನ ಪಡೆದರು. ಡಾ. ಪಿ. ಕೃಷ್ಣಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement