ಪತಿ, ಅತ್ತೆ, ಮಾವನಿಗೆ ಜೈಲು
ಮೈಸೂರು: ಹೆಚ್ಚಿನ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿದ ಪತಿ, ಅತ್ತೆ ಮತ್ತು ಮಾವನಿಗೆ ಮೈಸೂರಿನ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಪತಿಗೆ 5 ವರ್ಷ, ಅತ್ತೆ- ಮಾವನಿಗೆ ತಲಾ 3 ವರ್ಷ ಜೈಲು ಶಿಕ್ಷೆ ಹಾಗೂ ಮೂವರಿಗೆ ಒಟ್ಟು 3.70 ಲಕ್ಷ ದಂಡ ಪಾವತಿಸುವಂತೆ ನ್ಯಾಯಾಲಯವು ಸೂಚಿಸಿದೆ.
ಮೈಸೂರಿನ ಕೃಷ್ಣಮೂರ್ತಿಪುರಂ ನಿವಾಸಿ ಬಾಲಸುಂದರ್ ಅ. ಸಂಜು, ಇವರ ತಂದೆ ಎಂ.ಕೆ. ಸಿದ್ದಲಿಂಗೇಗೌಡ ಮತ್ತು ತಾಯಿ ನಾಗರತ್ನಮ್ಮ ಶಿಕ್ಷೆಗೆ ಗುರಿಯಾದವರು.
ಪ್ರಕರಣದ ವಿವರ: 2004ರಲ್ಲಿ ವೀಣಾ ಪ್ರಿಯದರ್ಶಿನಿ ಮತ್ತು ಬಾಲಸುಂದರ್ ವಿವಾಹವಾಗಿದ್ದು, ನಿಶ್ಚಿತಾರ್ಥ ಮತ್ತು ಮದುವೆ ವೇಳೆಯಲ್ಲಿ 1.50 ಲಕ್ಷ ವರದಕ್ಷಿಣೆ, 160 ಗ್ರಾಂ. ಚಿನ್ನಾಭರಣ ನೀಡಿದ್ದರು. ಮದುವೆಯ ನಂತರ ಪತ್ನಿ ವೀಣಾಳನ್ನು ತವರು ಮನೆಗೆ ಕಳುಹಿಸಿದ ಬಾಲಚಂದರ್, ಹೆಚ್ಚುವರಿ ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ಬೇಡಿಕೆ ಇಟ್ಟಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಸ್. ಶಿವಕುಮಾರ್ ವಾದಿಸಿದ್ದರು.