ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪೇಜಾವರ ಶ್ರೀಗಳ ಗಡಿಪಾರಿಗೆ ಆಗ್ರಹ

Rashmi Kasaragodu
Updated On : 31 Oct 2013, 12:17 pm

ಕ.ಪ್ರ.ವಾರ್ತೆ   ಮೈಸೂರು   ಅ. 30
ಪೇಜಾವರ ಶ್ರೀಗಳನ್ನು ಉಡುಪಿಯಿಂದ ಗಡಿಪಾರು ಮಾಡಬೇಕು ಎಂದು ಮೈಸೂರು ಪ್ರದೇಶ ಕುರುಬರ ಜಾಗೃತಿ ಮತ್ತು ಅಭಿವೃದ್ಧಿ ಸಂಸ್ಥೆ ಒತ್ತಾಯಿಸಿದೆ.
ಅನಾದಿ ಕಾಲದಿಂದಲೂ ಚಾಣುಕ್ಯ- ಚಂದ್ರಗುಪ್ತ ಮೌರ್ಯ, ವಿದ್ಯಾರಣ್ಯ- ಹಕ್ಕಬುಕ್ಕ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಮತ್ತು ಸಿದ್ದರಾಮಯ್ಯ- ಹೀಗೆ ಬ್ರಾಹ್ಮಣ ಮತ್ತು ಕುರುಬ ಜನಾಂಗಗಳು ಒಂದಾಗಿ ದೇಶ ಮತ್ತು ನಾಡನ್ನು ಆಳಿದ್ದಾರೆ. ಆದರೆ ಪೇಜಾವರ ಅವರಂಥವರು ಸ್ವಾರ್ಥ ಸಾಧನೆಗಾಗಿ ವಿವಾದಾತ್ಮಕ ಹೇಳಿಕೆ ನೀಡಿ ಜನಾಂಗಗಳ ಮಧ್ಯೆ ಸಂಘರ್ಷ ಮತ್ತು ವೈಷಮ್ಯ ಮೂಡಿಸುತ್ತಿದ್ದಾರೆ ಎಂದು ಅಧ್ಯಕ್ಷ ಎನ್. ಮಹೇಶ್ ಮತ್ತು ಕಾರ್ಯದರ್ಶಿ ಲಿಂಗರಾಜು ಆರೋಪಿಸಿದ್ದಾರೆ.
ಇಂತಹ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಅಜ್ಞಾನ ಪ್ರದರ್ಶಿಸುತ್ತಿರುವ ಪೇಜಾವರ ಶ್ರೀಗಳನ್ನು ಉಡುಪಿಯಿಂದ ಗಡಿಪಾರು ಮಾಡಿ, ಉಡುಪಿ ಶ್ರೀಕೃಷ್ಣ ಮಠವನ್ನು ಸರ್ಕಾರದ ವಶಕ್ಕೆ ಪಡೆದು ಕನಕದಾಸರ ಕನಕಗುರು ಪೀಠಕ್ಕೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೇವಲ ದೀಕ್ಷೆ ನೀಡುವುದು, ಮಡಿವಂತಿಕೆ ಮಾಡುವುದನ್ನು ಮತ್ತು ಅನಿಷ್ಟ ಸಂಪ್ರದಾಯಗಳ ವಿರುದ್ಧ ಹೋರಾಡುತ್ತ ಕೃಷ್ಣ ಮತ್ತು ಕನಕರನ್ನು ಒಟ್ಟಾಗಿ ಪೂಜಿಸುತ್ತಿರುವ ಕುರುಬರಿಗೆ ನಿಮ್ಮ ಸಂಕೋಲೆಗಳ ವೈಷ್ಣವ ದೀಕ್ಷೆಯ ಅಗತ್ಯವಿಲ್ಲ. ಕನಕರ ಆದರ್ಶಗಳನ್ನು ಮೊದಲು ಪೇಜಾವರರು ಕಲಿಯಬೇಕು. ಓರ್ವ ಸ್ವಾಮೀಜಿಯಾಗಿ ಜಾತಿ ಜಾತಿಗಳ ಮಧ್ಯೆ ಮೂಗು ತೂರಿಸುವ ಅವರು ವಿಶ್ವಮಾನವರ ಸಾಲಿಗೆ ಸೇರಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement