ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮತದಾರರ ಪಟ್ಟಿ ಪರಿಷ್ಕರಣೆ ಶುರು

Rashmi Kasaragodu
Updated On : 31 Oct 2013, 12:20 pm

ಕ.ಪ್ರ.ವಾರ್ತೆ   ಮೈಸೂರು   ಅ. 30
ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವು ಜಿಲ್ಲೆಯಾದ್ಯಂತ ಬುಧವಾರದಿಂದ ಆರಂಭವಾಗಿದೆ.
ಚುನಾವಣಾ ಆಯೋಗದ ನಿರ್ದೇಶದನ್ವಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮವನ್ನು ಅ.30ರಿಂದ ಹಮ್ಮಿಕೊಳ್ಳಲಾಗಿದೆ. ಬುಧವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳು ಇದ್ದಲ್ಲಿ ನ.29ರೊಳಗೆ ಸಲ್ಲಿಸಬಹುದು.
ನ.5ರಿಂದ 8ರವರೆಗೆ ಗ್ರಾಮಸಭೆ, ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಮತದಾರರ ಪಟ್ಟಿಯ ಭಾಗಗಳನ್ನು ಓದಿ ಹೇಳುವುದು ಮತ್ತು ಹೆಸರು ಪರಿಶೀಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.
ನ.3, 10 ಮತ್ತು 17ರಂದು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರುಗಳಿಂದ ಹಕ್ಕು ಮತ್ತು ಆಕ್ಷೇಪಣೆ ಸ್ವೀಕರಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.21ರೊಳಗೆ ಹಕ್ಕು ಮತ್ತು ಆಕ್ಷೇಪಣೆ ಇತ್ಯರ್ಥಪಡಿಸಲಾಗುತ್ತದೆ.
ಡಿ.21ರಿಂದ ಪೂರಕ ಪಟ್ಟಿ ಸಿದ್ಧಪಡಿಸಿ, ಮುದ್ರಿಸಲಾಗುತ್ತದೆ. 2014ರ ಜ.6ಕ್ಕೆ ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆ ಹೊರಬೀಳಲಿದೆ. ಜಿಲ್ಲೆಯ ವ್ಯಾಪ್ತಿಯ 11 ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ಸಂಬಂಧಿಸಿದ ತಹಸೀಲ್ದಾರರ ಕಚೇರಿಯಲ್ಲಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮತ್ತು ವಲಯ ಕಚೇರಿಗಳಲ್ಲಿ ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗುತ್ತದೆ.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಫಾರಂ- 6 ಮೂಲಕ ಅರ್ಜಿ ಅಗತ್ಯ ದಾಖಲಾತಿಯೊಂದಿಗೆ ಹತ್ತಿರದ ಮತಗಟ್ಟೆಗಳಲ್ಲಿ ನ.29ರವರೆಗೆ ಸಲ್ಲಿಸಿ ಹೆಸರು ಸೇರಿಸಬಹುದು. ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರನ್ನು ತೆಗೆದುಹಾಕಲು, ಮತದಾರರ ವಿವರಗಳನ್ನು ತಿದ್ದುಪಡಿ ಮಾಡಿಸಲು ಹಾಗೂ ಒಂದೆ ವಿಧಾನಸಭಾ ಕ್ಷೇತ್ರದಲ್ಲಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವರ್ಗಾಯಿಸಲು ಅನುಕ್ರಮವಾಗಿ (ಫಾರಂ-7, ಫಾರಂ- 8 ಮತ್ತು ಫಾರಂ-8ಎ) ಸಂಬಂಧಿಸಿದ ನಿರ್ದಿಷ್ಟಾಧಿಕಾರಿಗಳಿಗೆ ಸಲ್ಲಿಸಬಹುದು. ಜ.1ರ ಅರ್ಹತಾ ದಿನಾಂಕಕ್ಕೆ 18 ವರ್ಷ ಪೂರ್ಣಗೊಳ್ಳುವ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು.
ಸಾರ್ವಜನಿಕರು ತಮ್ಮ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿನ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ ಢಿಢಿಢಿ.್ಛಜ್ಟ್ಞಛ್ಠಟಿಛಡಿಛ್ಞಛ.್ಞಛ್ಠ.ಟ್ಝ್ಛಿ.್ಝಟಿನಲ್ಲಿ ಪರಿಶೀಲಿಸಬಹುದು ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ವೇಳೆ ಮಾತ್ರ ಮತದಾರರ ಪಟ್ಟಿ ಪರಿಶೀಲಿಸಿಕೊಂಡು, ಹೆಸರು ಇಲ್ಲದೆ ಮತದಾನದಿಂದ ವಂಚಿತರಾಗುವ ಬದಲು ಇಂದೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಬಹುದು. ಪರಿಷ್ಕರಣೆ ಸಂಬಂಧ ಮಾಹಿತಿ ಪಡೆಯಲು ಪಾಲಿಕೆ ಕಚೇರಿ ದೂ. 2418860, ಮೈಸೂರು ಎಸಿ ಕಚೇರಿ ದೂ. 2422100, ಮೈಸೂರು ತಾಲೂಕು ಕಚೇರಿ ದೂ. 0821-241811, ನಂಜನಗೂಡು- 08221- 226002, ಟಿ. ನರಸೀಪುರ- 08227- 261233, ಹುಣಸೂರು ಎಸಿ 08222- 252073, ಪಿರಿಯಾಪಟ್ಟಣ- 08223- 274175, ಕೆ.ಆರ್. ನಗರ- 08223- 262371, ಹುಣಸೂರು- 08222- 252040 ಮತ್ತು ಎಚ್.ಡಿ. ಕೋಟೆ- 08228- 255325 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement