ಮನೆಯಲ್ಲಿ ಕಳ್ಳತನ; ವ್ಯಕ್ತಿಗೆ ಜೈಲು ಶಿಕ್ಷೆ
ಮೈಸೂರು: ಎರಡು ಮನೆ ಬಾಗಿಲು ಮುರಿದು ಕಳವು ಮಾಡಿದ್ದ ವ್ಯಕ್ತಿಗೆ ಮೈಸೂರಿನ ನ್ಯಾಯಾಲಯವು ತಲಾ 1 ವರ್ಷ 8 ತಿಂಗಳು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಎನ್.ಆರ್. ಮೊಹಲ್ಲಾದ ಬಡಾಮಕಾನ್ ರಸ್ತೆ ನಿವಾಸಿ ಲೇ. ಅಬ್ದುಲ್ ರಷೀದ್ ಎಂಬವರ ಪುತ್ರ ತಬ್ರೀಜ್ ಯಾನೆ ಅ. ತಬ್ಬು(28) ಶಿಕ್ಷೆಗೆ ಗುರಿಯಾದವ. ಈತನು ತಿಲಕ್ನಗರದ 16ನೇ ಕ್ರಾಸ್ ನಿವಾಸಿ ವಸಂತ ಅವರ ಮನೆ ಬಾಗಿಲು ಮುರಿದು 1.73 ಲಕ್ಷ ಮೌಲ್ಯದ ವಸ್ತುಗಳು ಹಾಗೂ ತಿಲಕ್ನಗರದ 2ನೇ ಕ್ರಾಸ್ ನಿವಾಸಿ ಮನೋಹರ್ ರಾವ್ ಎಂಬವರ ಮನೆಯ ಬೀಗ ಮುರಿದು 3 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇನ್ನಿತರ ವಸ್ತುಗಳನ್ನು ಕಳವು ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎನ್.ಆರ್. ಠಾಣೆ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 1ನೇ ಸಿವಿಲ್ ಜಡ್ಸ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಎಚ್. ಶಶಿಧರ ಶೆಟ್ಟಿ ಅವರು ತಬ್ರೀಜ್ ಯಾನೆ ಮೇಲಿನ ಆರೋಪ ಸಾಬೀತಾಗಿದೆ ಎಂದು 1 ವರ್ಷ 8 ತಿಂಗಳು ಕಠಿಣ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.