ಸಮಾಜ ಸ್ವಾಸ್ಥ್ಯ ಕಾಪಾಡುವಲ್ಲಿ ಎನ್ಜಿಒ ಪಾತ್ರ ಮಹತ್ವ: ಸಿದ್ದಲಿಂಗ ಸ್ವಾಮೀಜಿ
ಕ.ಪ್ರ.ವಾರ್ತೆ ಮೂಗೂರು ಅ. 30
ಸ್ವಾಸ್ಥ್ಯ ಸಮಾಜದ ನಿರ್ಮಾಣ ಮಾಡುವುದರಲ್ಲಿ ಸಂಘ- ಸಂಸ್ಥೆಗಳ ಪಾತ್ರ ಮಹತ್ತರ ವಹಿಸಿದೆ. ಆ ನಿಟ್ಟಿನಲ್ಲಿ ಎಂ.ಡಿ. ಬಸವರಾಜು ಅಭಿಮಾನಿ ಸಂಘ ಕಾರ್ಯೋನ್ಮುಖಗೊಳ್ಳಬೇಕಾಗಿದೆ ಎಂದು ವಾಟಾಳು ಮಠದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗ್ರಾಮದ ತ್ರಿಪುರ ಸುಂದರಿ ಅಮ್ಮನವರ ದೇವಾಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಎಂ.ಡಿ. ಬಸವರಾಜು ಅಭಿಮಾನಿ ಸಂಘದ 5ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರ ಹಾಗೂ ವಿವಿಧ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಪದಾಧಿಕಾರಿಗಳು ಬಸವರಾಜು ಅವರ ಆದರ್ಶಗಳನ್ನು ಪಾಲಿಸುವುದರ ಜತೆಗೆ, ಸಂಘ- ಸಂಸ್ಥೆಗಳು ಸಂಘಟನೆಯ ಮೂಲಕ ದುರ್ಬಲ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.
ಅದರಂತೆ ಬಸವರಾಜು ಅವರು 5 ವರ್ಷದಲ್ಲಿ ಸಾಕಷ್ಟು ಗ್ರಾಮದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಇನ್ನೂ ಮುಂದಿನ ಐದು ವರ್ಷಗಳಲ್ಲಿ ಮೂಗೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಪಣತೊಟ್ಟಿದ್ದಾರೆ. ಇವರ ಸೇವೆ ಪ್ರಗತಿಪರ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಮಾಜದ ಸೇವಾರತ್ನ ಎಂದು ಬಿರುದು ನೀಡಿ ವಾಟಾಳು ಶ್ರೀಗಳು ಸನ್ಮಾನಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಚಿಕ್ಕಣ್ಣ ಮಾತನಾಡಿ, ಯಾವೊಬ್ಬ ವ್ಯಕ್ತಿಯು ಜಾತಿ, ಮತ ಗುರುತಿಸಿಕೊಂಡು ಹುಟ್ಟುವುದಿಲ್ಲ. ಅದರಂತೆ ಎಂ.ಡಿ. ಬಸವರಾಜು ಅವರು ಎಲ್ಲಾ ವರ್ಗದ ಜನತೆಯ ಪ್ರೀತಿ ವಿಶ್ವಾಸ ಗಳಿಸಿ ವರ್ಗ ಭೇದ ಮರೆತು ಸೇವಾ ಮನೋಭಾವನೆ ಹೊಂದಿದ್ದಾರೆ. ಇವರ ಮಾಗದರ್ಶನದಲ್ಲಿ ಅಭಿಮಾನಿಗಳು ಸಾಮಾಜಿಕ ಜವಾಬ್ದಾರಿ ಅರಿತು ಬೃಹತ್ ಪ್ರಮಾಣದಲ್ಲಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳುವುದರ ಮೂಲಕ ನಿಶಕ್ತ ವರ್ಗಕ್ಕೆ ಸಹಕಾರ ನೀಡುವಂತೆ ಸಲಹೆ ನೀಡಿದರು.
ಕಾಂಗ್ರೆಸ್ ಯುವ ಮುಖಂಡ ಸುನೀಲ್ ಬೋಸ್ ಅವರಿಗೆ ಗ್ರಾಮಾಭಿವೃದ್ಧಿ ಕಾಮಗಾರಿಗಳ ಮನವಿ ಪತ್ರವನ್ನು ಸಂಘದ ವತಿಯಿಂದ ಸಲ್ಲಿಸಲಾಯಿತು.
ಜಿಪಂ ಮಾಜಿ ಅಧ್ಯಕ್ಷ ಬಸವರಾಜು, ಸಂಘದ ಗೌರವಾಧ್ಯಕ್ಷ ಮಂಚನಾಯಕ ಅಧ್ಯಕ್ಷ ಜಗದೀಶ್, ಹೊನ್ನನಾಯಕ, ಪುಟ್ಟರಾಜು, ಚಾ. ನಗರ ಚೂಡಾ ಮಾಜಿ ಅಧ್ಯಕ್ಷ ರಾಮಚಂದ್ರ, ತಾಯೂರು ವಿಠಲಮೂರ್ತಿ, ಚಂದಕವಾಡಿ ಕರುಗನಾಯಕ, ಟೆಂಪೊ ಮಹದೇವಣ್ಣ, ಶಿವಮೂರ್ತಿ, ನಾಗೇಶ್, ಉಮೇಶ್, ಎಂ.ಕೆ. ಸಿದ್ದರಾಜು, ಗುರುಸಿದ್ದಪ್ಪ, ನಾಗರಾಜು, ಶೇಖರ್, ಡೇರಿ ಅಧ್ಯಕ್ಷ ಎಂ.ಎಂ. ಬಸವಣ್ಣ, ಎಂ.ಪಿ. ಮರಿಸ್ವಾಮಿ, ಉಪನ್ಯಾಸಕ ಕುಮಾರಸ್ವಾಮಿ, ಎಂ.ಪಿ. ನಿಂಗಪ್ಪ, ನಾಗೇಂದ್ರ, ರಾಜಣ್ಣ, ಗ್ರಾಪಂ ಸದಸ್ಯ ಎಂ. ರಾಜು, ಕಷ್ಣಸ್ವಾಮಿ, ಎಂ.ಡಿ. ಸಾಗರ್, ವಿನಯ್, ಶಿವಶಂಕರ್ ಇದ್ದರು.