ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿ.ಇಡಿ ಪದವಿ ವೆಚ್ಚ ಸರ್ಕಾರವೇ ಭರಿಸಲಿ

Rashmi Kasaragodu
Updated On : 31 Oct 2013, 11:51 am

ಕ.ಪ್ರ.ವಾರ್ತೆ   ಮೈಸೂರು   ಅ. 31
ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಬಿ.ಇಡಿ ಪದವಿ ಪಡೆಯಲು ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದರು.
2009ರಲ್ಲಿ ಪಿಯು ಉಪನ್ಯಾಸಕರನ್ನು ನೇಮಿಸಿಕೊಳ್ಳುವಾಗ ಬಿ.ಇಡಿ ಪದವಿ ಕಡ್ಡಾಯ ಮಾಡಿರಲಿಲ್ಲ. ಆದರೆ, ನೇಮಕಾತಿ ಬಳಿಕ ಬಿ.ಇಡಿ ಪದವಿ ಪಡೆಯುವುದು ಕಡ್ಡಾಯ ಎಂದು ಸರ್ಕಾರ ಸೂಚಿಸಿದೆ. ಹೀಗಾಗಿ ಉಪನ್ಯಾಸಕರು ಬಿ.ಇಡಿ ಪಡೆಯಲು ತಗಲುವ ವೆಚ್ಚವನ್ನು ಸಹ ಭರಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
2009 ಮತ್ತು 2013ನೇ ಸಾಲಿನ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರು ಬಿ.ಇಡಿ ಪದವಿ ಮಾಡಿಕೊಳ್ಳಲು ವೇತನ ಮತ್ತು ರಜೆಸಹಿತ ಅವಕಾಶ ಕಲ್ಪಿಸಿಕೊಟ್ಟಿರುವ ಮುಖ್ಯಮಂತ್ರಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ ಧನ್ಯವಾದ. ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿದ್ದ ಈ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ ಎಂದರು.
2009ನೇ ಸಾಲಿನಲ್ಲಿ ನೇಮಕವಾಗಿರುವ ಉಪನ್ಯಾಸಕರಿಗೆ ಕಾಯಂ ಪೂರ್ವ ಅವಧಿ ಘೋಷಣೆ ಮಾಡಿಲ್ಲ. ಇದರಿಂದ ಉಪನ್ಯಾಸಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ನೇಮಕವಾಗಿ ಕಾರ್ಯ ನಿರ್ವಹಿಸುತ್ತಿರುವ 59 ಸಾವಿರ ಬೋಧಕರಿಗೆ ಕನಿಷ್ಠ ವೇತನ, ವಾರ್ಷಿಕ ವೇತನ ಬಡ್ತಿ ಮತ್ತು ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸುವ ವಿಚಾರದಲ್ಲಿ ಸರ್ಕಾರ ದ್ವಂದ್ವ ನೀತಿ ಅನುಸರಿಸಿತು. ಈ ವಿಚಾರದಲ್ಲಿ ಸೌಲಭ್ಯ ವಂಚಿತರು ಸುಪ್ರೀಂ ಕೋರ್ಟ್ಗೆ ಹೋಗಿದ್ದರು. ಸುಪ್ರೀಂಕೋರ್ಟ್ ಅಂತಿಮವಾಗಿ ಬೋಧಕರ ಪರವಾಗಿ ತೀರ್ಪು ನೀಡಿ, 90 ದಿನದೊಳಗೆ ತೀರ್ಪು ಜಾರಿಗೊಳಿಸಬೇಕು ಎಂದು ಆದೇಶಿಸಿದೆ. ಆದರೆ, ಸುಪ್ರೀಂಕೋರ್ಟ್ ಆದೇಶ ಬಂದು 2 ತಿಂಗಳಾದರೂ ಸರ್ಕಾರ ಕಿಂಚಿತ್ತು ಗಮನ ಹರಿಸಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement