ಮಳಿಗೆಯಲ್ಲಿ ಕಳವು
ಮೈಸೂರು: ಎಲೆಕ್ಟ್ರಿಕಲ್ ಅಂಗಡಿ ಬಾಗಿಲು ಮುರಿದು ಸಾವಿರಾರು ರು. ಮೌಲ್ಯದ ವಸ್ತುಗಳು ಕಳವು ಮಾಡಿರುವ ಘಟನೆ ನಗರದ ಹೊರವಲಯದಲ್ಲಿರುವ ಹೂಟಗಳ್ಳಿಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಹೂಟಗಳ್ಳಿ ಹುಣಸೂರು ಮುಖ್ಯರಸ್ತೆಗೆ ಸೇರಿದಂತಿರುವ ಬಾಲಾಜಿ ಎಲೆಕ್ಟ್ರಿಕಲ್ ಬಾಗಿಲು ಮುರಿದು, 4 ಮಿಕ್ಸಿ, 2 ಸೀಲಿಂಗ್ ಫ್ಯಾನ್, 2 ಟೇಬಲ್ ಕಳವು ಮಾಡಿದ್ದಾರೆ. ಒಟ್ಟು 24 ಸಾವಿರ ಮೌಲ್ಯದ ವಸ್ತುಗಳು ಕಳವಾಗಿದೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ ಅಪಹರಣಕಾರರ ಚಹರೆ ಬಿಡುಗಡೆ
ಮೈಸೂರು: ಜಯನಗರ ಜಯಲಕ್ಷ್ಮಮ್ಮ ಎಂಬವರ 100 ಗ್ರಾಂ. ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋದ ವ್ಯಕ್ತಿಯೊಬ್ಬನ ಚಹರೆಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಆಸಾಮಿ ಎಲ್ಲಿಯಾದರೂ, ಯಾರಿಗಾದರೂ ಪತ್ತೆಯಾದಲ್ಲಿ ಅಥವಾ ಈತನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ದೂ. 0821- 2418321, 521 ಸಂಪರ್ಕಿಸಲು ಅಶೋಕಪುರಂ ಠಾಣೆ ಪೊಲೀಸರು ಕೋರಿದ್ದಾರೆ.
ಬನ್ನೂರು ವ್ಯಕ್ತಿ ನಾಪತ್ತೆ
ಮೈಸೂರು: ಟಿ. ನರಸೀಪುರ ತಾಲೂಕು ಬನ್ನೂರು ವಿನಾಯಕ ಕಾಲೋನಿ ನಿವಾಸಿ ಲೇ. ರಾಮಯ್ಯ ಎಂಬವರ ಪುತ್ರ ನಾಗರಾಜು (40) ಕೂಲಿ ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 08227- 275632 ಸಂಪರ್ಕಿಸಲು ಬನ್ನೂರು ಠಾಣೆ ಎಸ್ಐ ಸಂತೋಷ್ ಕಶ್ಯಪ್ ಕೋರಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಮೈಸೂರು: ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಮೈಸೂರು ತಾಲೂಕು ಹಾರೋಹಳ್ಳಿ ಗ್ರಾಮದ ನಾರಾಯಣ ಎಂಬವರ ಜಮೀನಿನ ಬಳಿಯ ವಿರಿಜಾ ನಾಲೆಯಲ್ಲಿ ಬುಧವಾರ ಶವ ಪತ್ತೆಯಾಗಿದೆ. ಹಸಿರು ಟೀ- ಶರ್ಟ್ ಧರಿಸಿದ್ದು, ಟೀ- ಶರ್ಟ್ ಮೇಲ್ಭಾಗದಲ್ಲಿ ಪೊಲೀಸ್ ಎಂದು ಬರೆಯಲಾಗಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2444955 ಸಂಪರ್ಕಿಸಲು ಎಸ್ಐ ಜಗದೀಶ್ ಕೋರಿದ್ದಾರೆ.