ಮೋದಿ ರ್ಯಾಲಿ ನೋಂದಣಿಗೆ ಚಾಲನೆ
ಪಿರಿಯಾಪಟ್ಟಣ: ಬಿಜೆಪಿ ನಾಯಕ ನರೇಂದ್ರ ಮೋದಿ ಮುಂದಿನ ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಆರ್.ಟಿ. ಸತೀಶ್ ಹೇಳಿದರು. ಪಟ್ಟಣದ ಕಚೇರಿಯಲ್ಲಿ ನ.17ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೋದಿ ಅವರ ಕಾರ್ಯಕ್ರಮಕ್ಕೆ ತೆರಳಲಿರುವ ಕಾರ್ಯಕರ್ತರ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಖಚಿತ. ಯುಪಿಎ ಸರ್ಕಾರ ತನ್ನ ಭ್ರಷ್ಟಚಾರಗಳಿಂದ ಚುನಾವಣೆಯಲ್ಲಿ ಸೋತು ಅನುಭವಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಾದ ಪಿ.ವಿ. ಬಸವರಾಜಪ್ಪ, ಎಂ.ಎಂ. ರಾಜೇಗೌಡ, ಪ್ರಸನ್ನಕೇಶವ, ಲೋಕಪಾಲಯ್ಯ, ಮಾಗಳಿ ರವಿ, ಪ್ರಸನ್ನ, ಕೃಷ್ಣೇಗೌಡ, ವಕೀಲ ಕೃಷ್ಣಪ್ರಸಾದ್, ತಿಮ್ಮಯ್ಯ, ಶಶಿ, ಸಣ್ಣಸ್ವಾಮಿ, ಸುಂದರ್ಶನ್, ಪಿ.ಜೆ. ರವಿ ಇದ್ದರು.