ವೇಷ ವಿನ್ಯಾಸ ಸ್ಪರ್ಧೆ
ಮೈಸೂರು: ಕೇನ್ಸ್ ಟೆಕ್ನಾಲಜಿ ವತಿಯಿಂದ 25ನೇ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ವೇಷ ವಿನ್ಯಾಸ ಸ್ಪರ್ಧೆಯನ್ನು ನ.2 ಮತ್ತು 3 ರಂದು ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದೆ.
ಉರುಸ್ ಆಚರಣೆ
ಆಸ್ತಾನ ಸಲಮಾನಿಯಾ ದರ್ಗಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ನ.2 ರಂದು ವಾರ್ಷಿಕ ಗಂಧದ ಉರುಸ್ ಸಲ್ಮಾನಿಯಾ ಆಚರಿಸಲಿದೆ. ಸಂಜೆ 6ಕ್ಕೆ ಗಂಧದ ಉರುಸ್ ಷರೀಫ್ನ ಮೆರವಣಿಗೆಯು ಲಷ್ಕರ್ ಮೊಹಲ್ಲಾದ ಸಂಘದಿಂದ ಹೊರಡಲಿದೆ.
ಪರೀಕ್ಷೆ ತರಬೇತಿ
ನವೋದಯ ಫೌಂಡೇಶಷನ್ ವತಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 10 ಸಾವಿರ ಕ್ಲರಿಕಲ್ ಮತ್ತು ಪ್ರೊಬೇಷನರಿ ಹುದ್ದೆಗಳಿಗೆ ತರಬೇತಿ ಆಯೋಜಿಸಿದೆ. ಆಸಕ್ತರು ನ.4ರೊಳಗೆ ಪ್ರತಿದಿನ ಸಂಜೆ 6 ರಿಂದ 8 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 9686072224 ಸಂಪರ್ಕಿಸಬಹುದು. ರಾಮಸ್ವಾಮಿ ವೃತ್ತದ ಬಳಿ ಇರುವ ವಿದ್ಯಾಭವನದಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ ನೀಡಲಾಗುವುದು. ಮಾಹಿತಿಗಾಗಿ ಡಾ.ಎ.ಎನ್. ಸೋಮಶೇಖರ್, 9448938469 ಸಂಪರ್ಕಿಸಬಹುದು.
ರಾಜ್ಯೋತ್ಸವ
ಮಹಾರಾಜ ಕಾಲೇಜಿನಲ್ಲಿ ನ.7ರ ಬೆಳಗ್ಗೆ 11ಕ್ಕೆ ಶತಮಾನೋತ್ಸವ ಭವನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಉದ್ಘಾಟಿಸುವರು. ಪ್ರೊ.ಜಿ.ಎಚ್. ನಾಯಕ್ ಗೌರವ ಸಮರ್ಪಿಸುವರು.
ರಸಪ್ರಶ್ನೆ
ಕ್ರಿಕೆಟ್ ತೀರ್ಪುಗಾರರ ಸಂಸ್ಥೆಯ ದಿನಾಚರಣೆ ಅಂಗವಾಗಿ ಅಂತರಶಾಲಾ ಕ್ರಿಕೆಟ್ ರಸಪ್ರಶ್ನೆಯು ನ.11ರ ಬೆಳಗ್ಗೆ 10ಕ್ಕೆ ಗಂಗೋತ್ರಿ ಗ್ಲೇಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಏರ್ಪಡಿಸಿದೆ. ನ.8ರೊಳಗೆ ಆಸಕ್ತ ಶಾಲೆಗಳು ಹೆಸರು ನೋಂದಾಯಿಸಿಕೊಳ್ಳಬಹುದು. ಅನಂತ್, ಮೊ. 9964598283 ಸಂಪರ್ಕಿಸಿರಿ.
ರುದ್ರಾಭಿಷೇಕ
ಸರಸ್ವತಿಪುರಂನ ಎಸ್.ವೀಣಾ ಮತ್ತು ಎ.ಜೆ. ಶ್ರೀಧರ್ ಅವರ ನಿವಾಸದಲ್ಲಿ ನ.11ರ ಬೆಳಗ್ಗೆ 8ಕ್ಕೆ ನಾಲ್ಕನೇ ವರ್ಷದ ಕಾರ್ತಿಕ ಮಾಸದ ರುದ್ರಾಭಿಷೇಕ ನಡೆಯಲಿದೆ.
ಅಧ್ಯಕ್ಷರಾಗಿ ಆಯ್ಕೆ
ಖದ್ದರ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಡಿ.ದೊಡ್ಡಯ್ಯ ಅವಿರೋಧ ಆಯ್ಕೆ ಯಾಗಿದ್ದಾರೆ ಎಂದು ಸಂಘದ ವ್ಯವಸ್ಥಾಪಕ ಪಿ. ಗುರುಮೂರ್ತಿ ಭಟ್ ತಿಳಿಸಿದ್ದಾರೆ.