ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಾಲಾ ಕಾಮಗಾರಿ ಪರಿಶೀಲನೆ

Rashmi Kasaragodu
Updated On : 31 Oct 2013, 11:54 am

ಕ.ಪ್ರ.ವಾರ್ತೆ   ಕೆ.ಆರ್. ನಗರ   ಅ.  31
ಕಳಪೆ ಕಾಮಗಾರಿ, ಸ್ಥಗಿತಗೊಂಡಿರುವ ಸ್ಟೇಡಿಯಂ ಕೆಲಸ, ಒಡೆದು ಹೋಗಿರುವ ಕಾಂಪೌಂಡ್, ಬಳಕೆಗೆ ಬಾರದ ಕುಡಿಯುವ ನೀರಿನ ಟ್ಯಾಂಕ್...
ಇವು ತಾಲೂಕಿನ ಹಂಪಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಾಪಂ ಪ್ರಭಾರ ಅಧ್ಯಕ್ಷರು ಮತ್ತು ಇತರ ಜನಪ್ರನಿಧಿಗಳು ಭೇಟಿ ನೀಡಿದಾಗ ಕಂಡು ಬಂದ ದೃಶ್ಯಗಳು.
ಅಧ್ಯಕ್ಷೆ ಶಕುಂತಲಾ ರಮೇಶ್, ಸದಸ್ಯ ನಾಗಣ್ಣ, ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ ಮತ್ತು ಮುಖಂಡರು ಶಾಲೆಗೆ ಭೇಟಿ ನೀಡಿದಾಗ, ಸ್ಥಳೀಯರು ದೂರು ನೀಡಿ ಕಳೆದ ವರ್ಷ ಜಿಪಂ ಅನುದಾನದಲ್ಲಿ 1.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಕಾಮಗಾರಿ ಅತ್ಯಂತ ಕಳಪೆಯಿಂದ ಕೂಡಿದ್ದು, ವಿದ್ಯಾರ್ಥಿಗಳಿಗೆ ಪ್ರಯೋಜನಕ್ಕೆ  ಬರುತ್ತಿಲ್ಲ ಆದರೂ, ಈ ಬಗ್ಗೆ ಯಾರು ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು.
ಶಾಲೆಯ ಆವರಣದಲ್ಲಿ ಕ್ರೀಡಾಂಗಣದ ಮೆಟ್ಟಿಲು ನಿರ್ಮಾಣ ಮಾಡಲು ಸಾಮಾಗ್ರಿಗಳನ್ನು ಸಾಗಿಸಲು ಕಾಂಪೌಂಡ್ ಒಡೆದು ಎರಡು ವರ್ಷಗಳು ಕಳೆದಿದ್ದರು, ಕಾಮಗಾರಿಯೂ ಅಪೂರ್ಣಗೊಂಡು ಕಾಂಪೌಂಡ್ ನಿರ್ಮಾಣ ಮಾಡದೆ ಹಾಗೆ ಬಿಟ್ಟಿರುವುದು ಕಂಡು ಬಂತು.
ಇದರಿಂದ ಶಾಲೆಯ ಆವರಣಕ್ಕೆ ದನಕರುಗಳು ನುಗ್ಗುತ್ತಿದ್ದು, ವಾತಾವರಣ ಕಲುಷಿತಗೊಂಡಿದೆ ಈ ಬಗ್ಗೆ ಯಾರು ಗಮನ ಹರಿಸಿಲ್ಲ ಈಗಲಾದರು ತುರ್ತು ಕ್ರಮ ಕೈಗೊಂಡು ಕಾಂಪೌಂಡ್ ಕಟ್ಟಿಸಿ, ನಿಂತು ಹೋಗಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಗುತ್ತಿಗೆದಾರನ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಸ್ಥಳೀಯರು ಒತ್ತಾಯಿಸಿದರು.
ಕುಡಿಯುವ ನೀರಿನ ಕಾಮಗಾರಿಯನ್ನು ಅತ್ಯಂತ ಕಳಪೆಯಿಂದ ನಿರ್ವಹಣೆ ಮಾಡಿ ಶಾಲೆಯವರ ಸುಪರ್ದಿಗೂ ವಹಿಸದಿರುವುದರಿಂದ ನಲ್ಲಿಗಳು ತುಕ್ಕು ಹಿಡಿಯುತ್ತಿದ್ದು, ಲಕ್ಷಾಂತರ ರು. ವ್ಯಯಿಸಿದರು ಶಾಲೆಗೆ ನೀರಿನ ಸವಲತ್ತು ಇಲ್ಲವಾಗಿದೆ.
ಅಧ್ಯಕ್ಷೆ ಶಕುಂತಲಾ ರಮೇಶ್ ಮತ್ತು ಸದಸ್ಯ ನಾಗಣ್ಣ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದರ ಜತೆಗೆ ಸಾಮಾನ್ಯ ಸಭೆಯಲ್ಲಿಯೂ ವಿಷಯ ಪ್ರಸ್ತಾಪಿಸಿ ಕಳಪೆ ಕಾಮಗಾರಿ ಮಾಡಿರುವವರ ವಿರುದ್ಧ ನಿರ್ದಾಕ್ಷ್ಯಿಣ್ಯ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಶಾಲೆಯ ಮೂಲ ಸವಲತ್ತಿಗೆ ಅಗತ್ಯ ಅನುದಾನ ನೀಡುವುದಾಗಿ  ಹೇಳಿದ ನಾಗಣ್ಣ ಈಗಾಗಲೇ ಒಂದು ಲಕ್ಷ ವೆಚ್ಚದಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡಲಾಗಿದ್ದು, ಉಳಿದ ಅನುದಾನವನ್ನು ನನ್ನ ಸದಸ್ಯ ನಿಧಿಯಿಂದಲೇ ಭರಿಸುವುದಾಗಿ ಹೇಳಿದರು.
ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ ಸ್ವಾಮಿಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಈಶ್ವರನಾಯಕ, ತಾಲೂಕು ಯುವ ಜೆಡಿಎಸ್ ಉಪಾಧ್ಯಕ್ಷ ಯೋಗೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ, ಮುಖ್ಯ ಶಿಕ್ಷಕ ಶಿವಾನಂದನಾಯಕ, ಮುಖಂಡರಾದ  ಕೋಳೂರು ರಮೇಶ್, ಲಾಳನಹಳ್ಳಿ ರವಿ, ಗಂಧನಹಳ್ಳಿ ಮಹದೇವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement