ದೇಗುಲದಿಂದ ಮನಶ್ಶಾಂತಿ: ಪ್ರಸನ್ನಾನಂದ ಸ್ವಾಮೀಜಿ
ಕ.ಪ್ರ.ವಾರ್ತೆ ಸುತ್ತೂರು ಸೆ. 2
ಪ್ರತಿಯೊಂದು ಗ್ರಾಮಗಳಲ್ಲಿ ದೇವಸ್ಥಾನ ನಿರ್ಮಿಸಿಕೊಂಡು ಶಾಂತಿ- ನೆಮ್ಮದಿಯಿಂದ ಜನರು ಬಾಳಲು ಅನುಕೂಲವಾಗುತ್ತದೆ ಎಂದು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದರು.
ನಂಜನಗೂಡು ತಾಲೂಕು ಎಸ್. ಹೊಸಕೋಟೆ ಗ್ರಾಮದಲ್ಲಿ ನಾಯಕ ಜನಾಂಗದ ವತಿಯಿಂದ ಏರ್ಪಡಿಸಿದ್ದ ಜೀರ್ಣೋದ್ಧಾರಗೊಂಡ ರಾಮ- ಲಕ್ಷ್ಮಣ ದೇವಾಲಯದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಂದು ಕುಟುಂಬವು ಶಾಂತಿ, ನೆಮ್ಮದಿಯಿಂದ ಬಾಳಲು ದೇವಸ್ಥಾನಗಳು ಪ್ರಮುಖವಾಗಿವೆ. ಪ್ರತಿ ಗ್ರಾಮಗಳಲ್ಲಿ ದೇವಸ್ಥಾನ ನಿರ್ಮಿಸಿಕೊಂಡು ಬಾಳಲು ಸಲಹೆ ನೀಡಿದರು.
ಮಾಜಿ ಶಾಸಕ ಸಿ. ಲಿಂಗಯ್ಯ ಮಾತನಾಡಿದರು. ಶಾಸಕ ಎಸ್. ಚಿಕ್ಕಮಾದು, ನಿವೃತ್ತ ಪೊಲೀಸ್ ಅಧಿಕಾರಿ ಮಹದೇವನಾಯ್ಕ, ಜಿಪಂ ಸದಸ್ಯ ಎಲ್. ಮಾದಪ್ಪ, ತಾಪಂ ಸದಸ್ಯ ಮಹದೇವಸ್ವಾಮಿ, ಗ್ರಾಪಂ ಅಧ್ಯಕ್ಷ ಗೌರಮ್ಮ, ಜವರಯ್ಯ, ಕಾಂಗ್ರೆಸ್ ಮುಖಂಡರಾದ ಕವಿತ ಕೃಷ್ಣ, ಆಲತ್ತೂರು ಸಿದ್ದಪ್ಪ, ವಕೀಲರಾದ ಹೊಸಕೋಟೆ ಬಸವರಾಜು, ಗ್ರಾಪಂ ಉಪಾಧ್ಯಕ್ಷ ಸಪ್ಪೆಮಾದಶೆಟ್ಟರು, ಹೊಸಕೋಟೆ ಹಾಗೂ ಸುತ್ತಮುತ್ತ ಗ್ರಾಮಗಳ ಕಟ್ಟೆಗಡಿ ಯಜಮಾನರು, ಹೊಸಕೋಟೆ ಗ್ರಾಮದ ಎಲ್ಲ ಜನಾಂಗದ ಮುಖಂಡರು ಭಾಗವಹಿಸಿದ್ದರು.