ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪತ್ನಿ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ

Rashmi Kasaragodu
Updated On : 3 Sept 2013, 12:40 pm

ಮೈಸೂರು: ತನ್ನ ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಮೈಸೂರಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನಂಜನಗೂಡು ತಾಲೂಕು ದೇಬೂರು ನಿವಾಸಿ ಸುರೇಶ ಶಿಕ್ಷೆಗೆ ಗುರಿಯಾದವನು. ಇವರು ಕವಿತಾ ಎಂಬವರನ್ನು 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಮೂರು ಜನ ಗಂಡು ಮಕ್ಕಳಿದ್ದಾರೆ. ಗೀತಾ ಎಂಬಾಕೆಯೊಂದಿಗೆ ಸುರೇಶ ಅನೈತಿಕ ಸಂಬಂಧ ಹೊಂದಿದ್ದ.
2011ರ ಫೆ. 23 ರಂದು ತವರಿನಲ್ಲಿದ್ದ ಕವಿತಾ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಸುಟ್ಟಗಾಯಗಳೊಂದಿಗೆ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಕವಿತಾ ಮೃತಪಟ್ಟಿದ್ದರು. ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸುರೇಶ್ ಎಸ್. ಕೋಗಿಲಗೇರಿ ಅವರು ತಾಲೂಕು ದಂಡಾಧಿಕಾರಿ ಮುಂದೆ ಕವಿತಾ ನೀಡಿದ ಮರಣ ಪೂರ್ವ ಹೇಳಿಕೆ ಅನ್ವಯ ಸುರೇಶ ಮೇಲಿನ ಆರೋಪ ರುಜುವಾತಾಗಿದೆ ಎಂದು ನಿರ್ಣಯಿಸಿ, ಸುರೇಶಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎ.ಎ. ಪಾರಶೆಟ್ಟಿ ವಾದಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement