ಮೂಲವ್ಯಾಧಿ ತಪಾಸಣಾ ಶಿಬಿರ
ಕ.ಪ್ರ.ವಾರ್ತೆ ಮೈಸೂರು ಸೆ. 2
ಜೆಎಸ್ಎಸ್ ಆಯುರ್ವೇದ ವೈದ್ಯ ಕಾಲೇಜು ಹಾಗೂ ಲಯನ್ಸ್ ಐಕಾನ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಉಚಿತ ಮೂಲವ್ಯಾಧಿ ತಪಾಸಣಾ ಶಿಬಿರ ಸಮಾಪನಗೊಂಡಿತು.
ಮೇಟಗಳ್ಳಿಯ ಬಿಎಂಶ್ರೀ ನಗರದ ಸಪ್ತಸ್ವರ ಪ್ರೌಢಶಾಲೆಯಲ್ಲಿ ನಡೆದ ಶಿಬಿರವನ್ನು ಜೆಎಸ್ಎಸ್ ವಿದ್ಯಾಪೀಠದ ನಿರ್ದೇಶಕ ಆರ್. ಮಹೇಶ್ ಉದ್ಘಾಟಿಸಿ ಮಾತನಾಡಿ, ಈ ಕಾಯಿಲೆಗೆ ಮುಜುಗರ ಪಡದೆ ಜನತೆ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತರಾಗಲು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀಶ ಉಪಾಧ್ಯಾಯ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಜಿ. ಮಂಗಳಗಿ ಭಾಗವಹಿಸಿದ್ದರು. ಲಯನ್ಸ್ ಐಕಾನ್ ಅಧ್ಯಕ್ಷ ಸಿ.ಸಿ. ನರೇಶ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಸಿದ್ದೇಶ್ ಆರಾಧ್ಯಮಠ ಹಾಗೂ ತಂಡದವರು ಪೈಲ್ಸ್, ಪಿಸ್ತೂಲಾ, ಫಿಸರ್ ಹಾಗೂ ಮುಂತಾದ ಗುದಗತ ಕಾಯಿಲೆಗಳ ರೋಗಿಗಳ ತಪಾಸಣೆ ಹಾಗೂ ಶುಶ್ರೂಷೆ ನೀಡಿದರು.
ಡಾ.ಸಿ.ಎಸ್. ಅನಿಲ್ಕುಮಾರ್, ಡಾ. ಜಯಂತಿ, ಶ್ರೀಕಾಂತ್, ಪುಟ್ಟಸ್ವಾಮಿ, ಸುಧೀರ್ಕುಮಾರ್, ಗುರುಕುಮಾರ್, ಗಣೇಶ್ಬಾಬು, ಕೆ.ಸಿ. ಚನ್ನಕೇಶವ, ಮಾಲತೇಶ ಜೋಶಿ, ಪ್ರೊ. ಎನ್. ವೆಂಕೋಟಬರಾವ್, ಸ್ಥಾಪಕ ಅಧ್ಯಕ್ಷ ರವೀಂದ್ರ ಜೋಶಿ ಇದ್ದರು.