ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಾಮಾಜಿಕ ನ್ಯಾಯದ ಪರಿಕಲ್ಪನೆ ಅರಸರ ಕೊಡುಗೆ'

Rashmi Kasaragodu
Updated On : 3 Sept 2013, 12:38 pm

ಕ.ಪ್ರ.ವಾರ್ತೆ   ಹುಣಸೂರು   ಸೆ. 2
ಡಿ. ದೇವರಾಜ ಅರಸು ಅವರು ಶೋಷಿತ ಸಮುದಾಯದ ದನಿಯಾಗಿ ದಲಿತರಲ್ಲಿ ಸ್ವಾಭಿಮಾನದ ಬದುಕನ್ನು ಕಲ್ಪಿಸಿದರು ಹಾಗೂ ಜಾತಿ-ಜಾತಿಗಳ ನಡುವೆ ಸುಮಧುರ ಬಾಂಧವ್ಯ ತಂದು, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೂರಣ ನೀಡಿದ ಅರಸು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಂ.ಜಿ.ಆರ್. ಅರಸ್ ಬಣ್ಣಿಸಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ದಸಂಸ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸರ 98ನೇ ಜಯಂತಿಯ ಅಂಗವಾಗಿ ಆಯೋಜಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಅರಸರ ಕಾಲದಲ್ಲಿ ಚಾಲ್ತಿಯಲ್ಲಿದ್ದ ಹಣದ, ವಂಶ ಪಾರಂಪರ್ಯ ಗುತ್ತಿಗೆ ರಾಜಕಾರಣವನ್ನು ತಮ್ಮದೆ ಆದ ಶೈಲಿಯಲ್ಲಿ ಕಾನೂನಾತ್ಮಕವಾಗಿಯೆ ಹೊಡೆದೊಡಿಸಿದ ನಿಷ್ಠುರ ರಾಜಕಾರಣಿ  ಅವರಾಗಿದ್ದರು ಎಂದರು.   
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಡಿ. ತಿಮ್ಮಯ್ಯ ಮಾತನಾಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ದಲಿತ ಮುಖಂಡರಾದ ಡಿ. ಕುಮಾರ್, ಸಿಪಿಐ ಪ್ರಧಾನ ಕಾರ್ಯದರ್ಶಿ ವಿ. ಬಸವರಾಜ್ ಕಲ್ಕುಣಿಕೆ, ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ದಲಿತ ಮುಖಂಡರಾದ ಡಿ. ಕುಮಾರ್, ವರದರಾಜ್, ಅಂಬಿಶ್ರೀಧರ್, ಬಾಲು, ಕಿರಿಜಾಜಿ ಗಜೇಂದ್ರ, ದೇವೇಂದ್ರ, ಅರಸರ ಅನುಯಾಯಿಗಳಾದ ಉದಯ ಕಲ್ಲಹಳ್ಳಿ, ಪ್ರಾಣೇಶ್ ಶೆಟ್ಟರು, ಬನ್ನಾರಯ್ಯ, ನಂಜುಂಡಯ್ಯ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement